Home » Women rescue: ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ!

Women rescue: ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ!

0 comments

Women rescue: ಕಾರವಾರದ (Karwar) ಕುಮಟಾ ತಾಲೂಕಿನ ಕುಡ್ಲೆ ಬೀಚ್ ನಲ್ಲಿ ಈಜಲು ಹೋಗಿದ್ದ ವಿದೇಶಿ ಮಹಿಳೆಯೊಬ್ಬರು (Foreign women) ಮುಳುಗಿದ ಸಂದರ್ಭದಲ್ಲಿ ಕೂಡಲೇ ಇದನ್ನು ಗಮನಿಸಿದ ರಕ್ಷಣಾ ಸಿಬ್ಬಂದಿ (Women Rescue) ರಕ್ಷಿಸಿದ್ದಾರೆ. ಕಜಕಿಸ್ತಾನ ಮೂಲದ ಐದಾಲಿ ಎಂಬ 25 ವರ್ಷದ ಮಹಿಳೆ ಹಾಗೂ ಆಕೆಯ ಪತಿ ಕುಮಟಾದ ಕುಡ್ಲೆ ಬೀಚ್ ಗೆ ಬಂದಿದ್ದರು. ಈ ವೇಳೆ ಸಮುದ್ರಕ್ಕೆ ಇಳಿದು ಆಟವಾಡುವ ವೇಳೆ ಅಲೆಗಳ ರಭಸಕ್ಕೆ ಸಿಲುಕಿ ಐದಾಲಿ ಮುಳುಗಿದ್ದಾರೆ.ಕೂಡಲೇ ಇದನ್ನು ಗಮನಿಸಿದ ರಕ್ಷಣಾ ಸಿಬ್ಬಂದಿ ಮಂಜುನಾಥ್ ಹರಿಕಂತ್ರ, ಗಿರೀಶ್ ಗೌಡ, ನಾಗೇಂದ್ರ ಎಂಬವರು ಕ್ಷಣಾರ್ಧದಲ್ಲಿ ಮಹಿಳೆಯನ್ನು ಸಮುದ್ರದಿಂದ ಮೇಲಕ್ಕೆ ಕರೆತರಲಾಗಿದೆ. ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

You may also like