Lizard Luck: ದೀಪಾವಳಿ ಹಬ್ಬಕ್ಕೆ ಎಲ್ಲೆಡೆ ತಯಾರಿ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ದೀಪಾವಳಿಯನ್ನು ನವೆಂಬರ್ 12 ರಂದು ಆಚರಿಸಿ, ದೇವರ ಆಶೀರ್ವಾದ ಪಡೆಯಲಿದ್ದೇವೆ. ಸದ್ಯ ಶಾಸ್ತ್ರ ಪ್ರಕಾರ ದೀಪಾವಳಿಯ ದಿನದಂದು ಕಾಣಿಸುವ ಕೆಲವು ಸೂಚನೆಗಳು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಈ ಸೂಚಕಗಳು ಲಕ್ಷ್ಮಿ ದೇವಿ ನಿಮಗೆ ಒಲಿಯಲಿದ್ದಾಳೆ ಎಂಬುದರ ಸಂಕೇತವಾಗಿದೆ.
ಹೌದು, ದೀಪಾವಳಿಯ ದಿನದಂದು ಹಲ್ಲಿಯನ್ನು ನೋಡುವುದು ಶುಭ (Lizard Luck) ಸಂಕೇತವಾಗಿದೆ. ಈ ದಿನದಂದು ಹಲ್ಲಿ ಕಂಡರೆ, ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸಲಿದ್ದಾಳೆ ಎಂದು ಸೂಚಿಸುತ್ತದೆ. ಸಾಮಾನ್ಯವಾಗಿ ಜನರು ಹಲ್ಲಿಯನ್ನು ಕಂಡು ಓಡಿಸುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಮನೆಯಲ್ಲಿ ಹಲ್ಲಿ ಇರುವುದು ಶುಭ. ಜ್ಯೋತಿಷ್ಯದಲ್ಲಿ ಹಲ್ಲಿಗೆ ಸಂಬಂಧಿಸಿದ ಕೆಲವು ಶಕುನಗಳನ್ನು ಉಲ್ಲೇಖಿಸಲಾಗಿದೆ. ಇದು ದೊಡ್ಡ ಆರ್ಥಿಕ ಲಾಭವನ್ನು ತರುತ್ತದೆ.
ಮುಖ್ಯವಾಗಿ ದೀಪಾವಳಿಯಂದು ಹಲ್ಲಿ ಕಂಡರೆ, ಮನೆಯಲ್ಲಿ ಹಲ್ಲಿ ಓಡಾಡುವುದನ್ನು ನೋಡಿದರೆ, ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ನೆಲೆಸಲಿದ್ದಾಳೆ ಎಂದು ಅರ್ಥ. ಜೊತೆಗೆ ಹಣಕಾಸಿನ ಸಮಸ್ಯೆಗಳಿಗೆ ಶೀಘ್ರ ಮುಕ್ತಿ ಸಿಗಲಿದೆ ಎಂಬುದರ ಸೂಚಕ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೀಪಾವಳಿಯ ದಿನದಂದು ಹಲ್ಲಿ ಕಂಡರೆ ತಕ್ಷಣ ದೇವಸ್ಥಾನದಲ್ಲಿ ಅಥವಾ ದೇವರ ವಿಗ್ರಹದ ಬಳಿ ಇಟ್ಟಿರುವ ಅಕ್ಷತೆಯನ್ನು ದೂರದಿಂದ ಹಲ್ಲಿಗೆ ಚಿಮುಕಿಸಿ. ಹಾಗೆಯೇ ನಿಮ್ಮ ಆಸೆಯನ್ನು ತಾಯಿ ಲಕ್ಷ್ಮಿ ಬಳಿ ಹೇಳಿ ಅದನ್ನು ಈಡೇರಿಸುವಂತೆ ಪ್ರಾರ್ಥಿಸಿ. ಹೀಗೆ ಮಾಡುವುದರಿಂದ ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಬಹುದು.
ಇದನ್ನೂ ಓದಿ: ಈ ಮೊಬೈಲ್ ಕೊಂಡುಕೊಂಡ್ರೆ ಯಾವುದೇ ಭಾಷೆಯಲ್ಲೂ ನೀವು ಮಾತಾಡ್ಬೋದು – ಅರೆ ಹೇಗೆ ಅಂತೀರಾ..!?
