Home » Shivrajkumar ಕುಟುಂಬದಲ್ಲಿ LKG ಮಗುವಿಗೂ ಕ್ಯಾನ್ಸರ್ !! ಶಿವಣ್ಣನಿಂದಲೇ ಕಹಿ ಸತ್ಯ ಬಹಿರಂಗ

Shivrajkumar ಕುಟುಂಬದಲ್ಲಿ LKG ಮಗುವಿಗೂ ಕ್ಯಾನ್ಸರ್ !! ಶಿವಣ್ಣನಿಂದಲೇ ಕಹಿ ಸತ್ಯ ಬಹಿರಂಗ

0 comments

Shivrajkumar: ಹ್ಯಾಟ್ರಿಕ್ ಹೀರೋ ಕನ್ನಡಿಗರ ಮನೆ ಮಗ ಶಿವರಾಜ್ ಕುಮಾರ್(Shivrajkumar)ಅವರಿಗೆ ಯಶಸ್ವಿಯಾಗಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಾಗಿದೆ. ಅಭಿಮಾನಿಗಳ ಹಾರೈಕೆಯಿಂದ, ಪ್ರೀತಿ ವಿಶ್ವಾಸದಿಂದ, ವೈದ್ಯರ ಶತ ಪ್ರಯತ್ನದಿಂದಾಗಿ ಸತ್ಯ ಗುಣಮುಖರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅಮೆರಿಕದಲ್ಲಿ ಆರು ಗಂಟೆಗಳ ಕಾಲ ನಡೆದಿರುವ ಶಸ್ತ್ರಚಿಕಿತ್ಸೆಯ ಬಳಿಕವೂ ಹೆಚ್ಚು ರೆಸ್ಟ್ ಕೂಡ ಪಡೆಯದೇ ಮತ್ತೆ ನಟನೆಗೆ ಮರಳಿದ್ದಾರೆ. ಈ ನಡುವೆ ಶಿವಣ್ಣ ಅವರು ತಮ್ಮ ಕುಟುಂಬದ ಕುರಿತಾಗಿ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದರು. ಇದರ ಬೆನ್ನಲ್ಲೇ ಶಿವಣ್ಣ ಅವರು ಇನ್ನೊಂದು ಶಾಕಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಹೌದು, ಕ್ಯಾನ್ಸರ್‌ ಗೆದ್ದು ಬಂದ ಶಿವಣ್ಣ ಅವರು, ಇದೀಗ ಹಲವಾರ ಸಂದರ್ಶನಗಳಲ್ಲಿ ಕ್ಯಾನ್ಸರ್ ಬಗ್ಗೆ ಹೇಳಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ತಮ್ಮ ಕುಟುಂಬದಲ್ಲಿ ಹಲವರಿಗೆ ಕ್ಯಾನ್ಸರ್ ಇದ್ದ ವಿಷಯವನ್ನು ನಟ ಶಿವರಾಜ್‌ ಕುಮಾರ್‌ ಅವರು ಬಹಿರಂಗಪಡಿಸಿದ್ದು ನನ್ನ ತಾಯಿ, ತಂಗಿ ಪೂರ್ಣಿಮಾ, ನನ್ನ ಕಸಿನ್ಸ್ ಎಲ್ಲರಿಗೂ ಕ್ಯಾನ್ಸರ್ ಇತ್ತು, ಅದಕ್ಕಾಗಿಯೇ ನನಗೆ ಕ್ಯಾನ್ಸರ್ ಬಂದಿದೆ ಎಂದು ತಿಳಿದಾಗ ಇನ್ನೇನು ಮಾಡೋಕೆ ಆಗತ್ತೆ ಎಂದುಕೊಂಡುಬಿಟ್ಟಿದ್ದೆ ಎಂದು ಶಿವರಾಜ್‌ ಕುಮಾರ್‌ ಹೇಳಿದ್ದರು. ಆದರೆ ಇದರ ಬೆನ್ನಲ್ಲೇ ಅವರು ನಮ್ಮ ಕುಟುಂಬದಲ್ಲಿ LKG ಮಗುವಿಗೂ ಕೂಡ ಕ್ಯಾನ್ಸರ್ ಇತ್ತು ಎಂಬ ಅಚ್ಚರಿ ಸಂಗತಿ ಒಂದನ್ನು ಬಹಿರಂಗಪಡಿಸಿದ್ದಾರೆ.

ಯಸ್, ಶಿವರಾಜಕುಮಾರ್ ಅವರು ನಮ್ಮ ಮನೆಯಲ್ಲಿ ವರದಣ್ಣ ಅವರ ಮೊಮ್ಮಗಳಿಗೂ ಕೂಡ ಕ್ಯಾನ್ಸರ್ ಇತ್ತು ಎಂಬ ಅಚ್ಚರಿ ಸತ್ಯವನ್ನು ಹೊರಗಡಹಿದ್ದಾರೆ. ವರದಣ್ಣ ಎಂದರೆ ರಾಜಕುಮಾರ್ ಅವರ ಸಹೋದರ. ಅವರ ಮೊಮ್ಮಗಳು ಇನ್ನೂ ಎರಡು-ಮೂರು ವರ್ಷದ ಪುಟ್ಟ ಮಗು. ಅವಳು ಇನ್ನೂ ಎಲ್‌ಕೆಜಿಗೆ ಹೋಗುತ್ತಿದ್ದಳು. ಈ ವಿಚಾರ ಕೇಳಿ ನಮಗೆಲ್ಲರಿಗೂ ತುಂಬಾ ನೋವಾಯಿತು. ಇದ್ದಕ್ಕಿದ್ದಂತೆ ಅವಳ ಕೂದಲೆಲ್ಲ ಉದುರಿತು. ಇದನ್ನು ಕಂಡು ತುಂಬಾ ಸಂಕಟಪಟ್ಟೆವು ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

You may also like