Home » Shirva: ಅಕ್ರಮ ಮರಳು ಸಾಗಾಟ ಮಾಡ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲಾಕ್: ಟಿಪ್ಪರ್ ವಶಕ್ಕೆ!

Shirva: ಅಕ್ರಮ ಮರಳು ಸಾಗಾಟ ಮಾಡ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲಾಕ್: ಟಿಪ್ಪರ್ ವಶಕ್ಕೆ!

by ಕಾವ್ಯ ವಾಣಿ
0 comments

Shirva: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ಟಿಪ್ಪರ್ ವೊಂದನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಶಿರ್ವ- ಬೆಳ್ಮಣ್ (Shirva) ಮುಖ್ಯ ರಸ್ತೆಯ ಪೆರ್ನಾಲ್ ಯೂನಿಯನ್ ಬ್ಯಾಂಕ್ ಬಳಿ ನಡೆದಿದೆ.

ಪಿಲಾರ್ ಖಾನದ ಬಳಿ ಬರುತ್ತಿದ್ದ ಟಿಪ್ಪರನ್ನು ಗಮನಿಸಿ ನಿಲ್ಲಿಸುವಂತೆ ಸೂಚಿಸಿದಾಗ ಚಾಲಕ ಭಯಗೊಂಡು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ಅದರಲ್ಲಿ ಮರಳು ಇರುವುದನ್ನು ಆತನೇ ತಿಳಿಸಿದ್ದಾನೆ. ಟಿಪ್ಪರ್ ಚಾಲಕ ಗಿರೀಶ್ ಆತನ ಮಾಲಕ ದಿಲೀಪ್ ಕುಮಾರ್ ಪೆರ್ಡೂರು ಅವರ ಸೂಚನೆಯಂತೆ ಲೈಸೆನ್ಸ್ ಇಲ್ಲದೆ ಕಾನೂನುಬಾಹಿರವಾಗಿ ನದಿಯಿಂದ ಮರಳು ಕಳವು ಮಾಡಿ ಹಿರಿಯಡ್ಕಕ್ಕೆ ಸಾಗಿಸುತ್ತಿದ್ದರು.

ಇದೀಗ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಯೂನಿಟ್ ಮರಳು ಮತ್ತು ಟಿಪ್ಪರ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರ್ವ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

You may also like