Home » Lokayukta Raid: ಬೆಳ್ಳಂಬೆಳಗ್ಗೆ ಲೊಕಾಯುಕ್ತ ಅಧಿಕಾರಿಗಳ ದಾಳಿ – ಏಕಕಾಲದಲ್ಲಿ ಹಲವು ಭ್ರಷ್ಟ ಅಧಿಕಾರಿಗಳಿಗೆ ಶಾಕ್

Lokayukta Raid: ಬೆಳ್ಳಂಬೆಳಗ್ಗೆ ಲೊಕಾಯುಕ್ತ ಅಧಿಕಾರಿಗಳ ದಾಳಿ – ಏಕಕಾಲದಲ್ಲಿ ಹಲವು ಭ್ರಷ್ಟ ಅಧಿಕಾರಿಗಳಿಗೆ ಶಾಕ್

0 comments

Lokayuktha Raid: ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದು, ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರು ಸೇರದಂತೆ ಒಟ್ಟು ನಾಲ್ಕು ಜಿಲ್ಲೆಗಳಲ್ಲಿ, ಒಟ್ಟು 5 ಜನರಿಗೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ.

ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಬೆಂಗಳೂರು ಭಾಗಗಳಲ್ಲಿ ಲೋಕಾಯುಕ್ತ ದಾಳಿ ಮಾಡಲಾಗಿದ್ದು, ಬೆಂಗಳೂರಿನ ಎರಡು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ರೆವಿನ್ಯೂ ಆಫೀಸರ್ ಎನ್ ವೆಂಕಟೇಶ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಎಂಬುವರ ಮನೆ ಮೇಲೆ‌ ದಾಳಿ ಮಾಡಲಾಗಿದೆ. ಭ್ರಷ್ಟಾಚಾರ ಆರೋಪ ಹಿನ್ನೆಲೆ ದಾಳಿ ನಡೆಸಿದ ಲೋಕಾಯುಕ್ತ ಟೀಂ ಸದ್ಯ ಡಾಕ್ಯುಮೆಂಟ್ಗಳ ಪರಿಶೀಲನೆ ನಡೆಸುತ್ತಿದೆ.

ಎಲ್ಲೆಲ್ಲಿ ದಾಳಿ?
ಬೆಂಗಳೂರು – ಎನ್ ವೆಂಕಟೇಶ್ – ರೆವೆನ್ಯೂ ಆಫೀಸರ್ BBMP ದಾಸರಹಳ್ಳಿ ಸಬ್ ಡಿವಿಷನ್
ಬೆಂಗಳೂರು – ಓಂ ಪ್ರಕಾಶ್- ಸೀನಿಯರ್ ಅಸಿಸ್ಟೆಂಟ್ ಹಾರ್ಟಿಕಲ್ಚರ್ ಡೈರೆಕ್ಟರ್ – ಬಿಡಿಎ
ಹಾಸನ- ಜಯಣ್ಣ – ಎಕ್ಸಿಕ್ಯೂಟಿವ್ ಎಂಜಿನಿಯರ್-NHAI ಹಾಸನ
ಚಿಕ್ಕಬಳ್ಳಾಪುರ – ಅಂಜನಮೂರ್ತಿ- ಜೂನಿಯರ್ ಇಂಜಿನಿಯರ್ – ಡ್ರಿಂಕಿಂಗ್ ವಾಟರ್,ಸ್ಯಾನೆಟೈಸೇಷನ್ ಡಿಪಾರ್ಟ್ ಮೆಂಟ್
ಚಿತ್ರದುರ್ಗ – ಡಾ.ವೆಂಕಟೇಶ್ – ಹೆಲ್ತ್ ಆಫಿಸರ್ – ಹಿರಿಯೂರು

You may also like