Home » Lord Jagannath: ವಿದೇಶಿ ಮಹಿಳೆಯ ತೊಡೆಯ ಮೇಲೆ ಜಗನ್ನಾಥ ದೇವರ ಫೋಟೋ; ಕೇಸು ದಾಖಲು

Lord Jagannath: ವಿದೇಶಿ ಮಹಿಳೆಯ ತೊಡೆಯ ಮೇಲೆ ಜಗನ್ನಾಥ ದೇವರ ಫೋಟೋ; ಕೇಸು ದಾಖಲು

0 comments

Lord Jagannath: ಒಡಿಯಾದಲ್ಲಿ ವಿದೇಶೀ ಮಹಿಳೆಯೊಬ್ಬರ ತೊಡೆಯ ಮೇಲೆ ಶ್ರೀ ಜಗನ್ನಾಥನ ಟ್ಯಾಟೂ ರಚಿಸಿ ಭಾರೀ ವಿವಾದ ಸೃಷ್ಟಿಸಿದೆ. ಈ ಘಟನೆಯ ಬೆನ್ನಲ್ಲೇ ಮಹಿಳೆಯ ವಿರುದ್ಧ ಪೊಲೀಸರು ದೂರನ್ನು ದಾಖಲು ಮಾಡಿದ್ದಾರೆ.

ಭುವನೇಶ್ವರದ ಟ್ಯಾಟೂ ಪಾರ್ಲರ್‌ನಲ್ಲಿ ಈ ಟ್ಯಾಟೂ ಹಾಕಿಸಿರುವ ಮಹಿಳೆಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ನಂತರ ಭಕ್ತರಿಂದ ಭಾರೀ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ದೂರನ್ನು ದಾಖಲು ಮಾಡಲಾಗಿದೆ. ಎನ್‌ಜಿಒ ಸಂಸ್ಥೆಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ 299 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅಪಮಾನ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದರೆ ದಂಡನಾತ್ಮಕ ಕ್ರಮ ಕೈಗೊಳ್ಳಲು ಅವಕಾಶ ನೀಡುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಜಗನ್ನಾಥನ ಭಕ್ತರಿಂದ ಕೇಸು ದಾಖಲಾಗುತ್ತಿದ್ದಂತೆ, ಮಹಿಳೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ” ನಾನು ಶ್ರೀ ಜಗನ್ನಾಥನನ್ನು ಅವಮಾನಿಸಲು ಇಚ್ಚಿಸಿದಲ್ಲ. ನಾನು ನಿಜವಾದ ಜಗನ್ನಾಥ ಭಕ್ತೆ. ಪ್ರತಿದಿನ ದೇವಾಲಯಕ್ಕೆ ಹೋಗುತ್ತೇನೆ. ಕಲಾವಿದನಿಗೆ ಒಂದು ಗುಪ್ತ ಸ್ಥಳದಲ್ಲಿ ಟ್ಯಾಟೂ ಹಾಕಿ ಎಂದು ಹೇಳಿದೆ ಮಾತ್ರ. ಆದರೆ ಅದು ಈ ಮಟ್ಟದ ವಿವಾದವನ್ನು ಉಂಟು ಮಾಡುತ್ತದೆ ಎಂದು ನಾನು ಊಹಿಸಿರಲಿಲ್ಲ. ನನ್ನ ತಪ್ಪಿಗೆ ಕ್ಷಮಿಸಿ, ನಾನೂ ಈ ಟ್ಯಾಟೂ ಶೀಘ್ರ ತೆಗೆಸಿಕೊಳ್ಳುತ್ತೇನೆ ” ಎಂದು ಹೇಳಿದ್ದಾರೆ.

ಮಹಿಳೆ ಅಂದು ನನ್ನ ಶಾಪ್‌ಗೆ ಬಂದಿದ್ದು, ಜಗನ್ನಾಥನ ಟ್ಯಾಟೂ ಹಾಕಬೇಕು ಎಂದಿದ್ದರು. ಸಿಬ್ಬಂದಿಗಳು ತೊಡೆಯ ಮೇಲೆ ಬೇಡ, ಕೈ ಮೇಲೆ ಹಾಕಿ ಎಂದು ಸಲಹೆ ನೀಡಿದ್ದರು. ಆದರೆ ಮಹಿಳೆ ನನಗೆ ತೊಡೆಯ ಮೇಲೆಯೇ ಟ್ಯಾಟೂ ಹಾಕಿ ಎಂದು ಹಠ ಹಿಡಿದರು. ಈ ಕುರಿತು ನನಗೆ ಬೇಸರವಿದೆ. ನಾನು ಅಂದು ಶಾಪ್‌ನಲ್ಲಿ ಇರಲಿಲ್.‌ 25 ದಿನಗಳ ನಂತರ ಇದನ್ನು ಅಳಿಸಲಿದ್ದಾರೆ. ಈಗಲೇ ತೆಗೆದರೆ ಅದು ಇನ್‌ಫೆಕ್ಷನ್‌ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.

You may also like