Love fraud:ಪ್ರೀತಿ ಕುರುಡು ಅಂದಮೇಲೆ ಯಾವಾಗ, ಹೇಗೆ, ಯಾರಿಗೆ ಯಾರ ಮೇಲೆ ಪ್ರೀತಿ ಹುಟ್ಟುತ್ತೇ ಎಂಬುದು ಕೆಲವೊಮ್ಮೆ ಊಹಿಸಲು ಕೂಡ ಸಾಧ್ಯವಿಲ್ಲ. ಅದೇ ರೀತಿ ಪ್ರೀತಿ ಹೆಸರಲ್ಲಿ ಮೋಸ ನಡೆಯುತ್ತೆ ಅನ್ನೋದು ಕೂಡ ಊಹಿಸಲು ಸಾಧ್ಯವಿಲ್ಲ.
ಹಾಗೆಯೇ ಇಲ್ಲೊಬ್ಬ ಪಾಗಲ್ ಪ್ರೇಮಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿ ಕೈಕೊಟ್ಟ ಪ್ರಿಯಕರನ ವಿರುದ್ಧ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿಯ ಯುವತಿ ದೂರು ನೀಡಿದ್ದಾರೆ.
ಹೌದು, ಆರು ತಿಂಗಳ ಹಿಂದೆ ಬಾಗೇಪಲ್ಲಿ ತಾಲೂಕಿನ ರಾಮೋಜಿಪಲ್ಲಿಯಲ್ಲಿ ಸಂಬಂಧಿಕರ ಮನೆಗೆ ಜಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ವಿನೋದ್ ಎಂಬಾತ ಪರಿಚಯವಾಗಿದ್ದು, ಇಬ್ಬರ ನಡುವಿನ ಗೆಳೆತನ ಪ್ರೀತಿಗೆ ಚಿಗುರಿತ್ತು. ಅದಲ್ಲದೆ ಮದುವೆಯಾಗುವುದಾಗಿ ನಂಬಿಸಿ ಆತ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೈಕೊಟ್ಟಿದ್ದಾನೆ (Love fraud)ಎನ್ನಲಾಗಿದ್ದು, ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Mumbai: ಹುಡುಗರೇ ಎಚ್ಚರ..! ಹುಡ್ಗಿಯರಿಗಿನ್ನು ‘ಒಳ್ಳೆ ಫಿಗರ್’ ಅಂದ್ರೆ ಲೈಂಗಿಕ ಕಿರುಕುಳ ಕೊಟ್ಟಂತೆ! ಕೋರ್ಟ್ ಅಭಿಪ್ರಾಯ
