Home » ಬೆಳಕಿಗೆ ಬಂತು ಮತ್ತೊಂದು ಘೋರ ಲವ್ ಜಿಹಾದ್ ಪ್ರಕರಣ !! | ಪತಿ, ಆತನ ಸಹೋದರರು, ಮೌಲ್ವಿ ಸೇರಿದಂತೆ ನಾಲ್ವರಿಂದ ಯುವತಿಯ ಮೇಲೆ ನಿರಂತರ ಅತ್ಯಾಚಾರ

ಬೆಳಕಿಗೆ ಬಂತು ಮತ್ತೊಂದು ಘೋರ ಲವ್ ಜಿಹಾದ್ ಪ್ರಕರಣ !! | ಪತಿ, ಆತನ ಸಹೋದರರು, ಮೌಲ್ವಿ ಸೇರಿದಂತೆ ನಾಲ್ವರಿಂದ ಯುವತಿಯ ಮೇಲೆ ನಿರಂತರ ಅತ್ಯಾಚಾರ

0 comments

ದೇಶದಲ್ಲಿ ಇದೀಗ ಬಹಳಷ್ಟು ಲವ್ ಜಿಹಾದ್ ಪ್ರಕರಣಗಳು ಸದ್ದು ಮಾಡುತ್ತಿವೆ. ಹಾಗೆಯೇ ಮಧ್ಯಪ್ರದೇಶದಲ್ಲೂ ಅಂತಹದ್ದೇ ಪ್ರಕರಣ ದಾಖಲಾಗಿದ್ದು, ಹಿಂದೂ ಯುವಕನ ಹೆಸರು ಹೇಳಿ ಪರಿಚಯವಾಗಿದ್ದ ಮುಸ್ಲಿಂ ಯುವಕ, ಮತ್ತವನ ಸಹೋದರರು ಹಾಗೂ ಓರ್ವ ಮೌಲ್ವಿ ಸೇರಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗ್ವಾಲಿಯಾರ್‌ನಲ್ಲಿ ನಡೆದಿದೆ.

ಪತ್ನಿಯ ಮೇಲೆ ಅತ್ಯಾಚಾರ ಎಸಗಲು ಪತಿಯೇ ಕಾವಲಾಗಿ ನಿಂತಿದ್ದ ಎಂಬುದು ನಿಜವಾದ ಶಾಕಿಂಗ್ ಸುದ್ದಿ. ಈ ಸಂಬಂಧ ಗ್ವಾಲಿಯರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಪತಿ ಇಮ್ರಾನ್‌ಖಾನ್ ಅಲಿಯಾಸ್ ರಾಜು ಜಾದವ್, ಅವನ ತಾಯಿ ಸುಗಾ ಬೇಗಂ, ಸಹೋರರಾದ ದೇವರ್ ಅಮನ್, ಪುನ್ನಿ ಹಾಗೂ ಮೌಲ್ವಿ ಒಸಾಮಾ ಖಾನ್ ಸೇರಿದಂತೆ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಇಮ್ರಾನ್ ಖಾನ್ 2020ರ ಜನವರಿ ತಿಂಗಳಿನಲ್ಲಿ ಜಂಗಿಪುರ ದಬ್ರಾ ಮದರಸಾ ಬಳಿ ರಾಜು ಜಾದವ್ ಎಂಬ ಹೆಸರಿನಿಂದ ಯುವತಿಗೆ ಪರಿಚಯವಾಗಿದ್ದಾನೆ. ನಂತರ ಸ್ನೇಹಿತರಾಗಿ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಇಮ್ರಾನ್ 2021ರ ಜೂನ್ 15ರಂದು ಆಕೆಯನ್ನು ಗ್ವಾಲಿಯರ್‌ನಿಂದ ಡಾಬ್ರಾಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತಂಪುಪಾನಿಯಾದಲ್ಲಿ ಅಮಲಿನ ಪದಾರ್ಥ ಬೆರಸಿ ಕುಡಿಸಿದ್ದಾನೆ. ಆಕೆ ಪ್ರಜ್ಞೆ ತಪ್ಪಿದ ನಂತರ ಅತ್ಯಾಚಾರ ಎಸಗಿದ್ದಾನೆ.ಅತ್ಯಾಚಾರ ಎಸಗಿದ ಬಳಿಕ ಆರೋಪಿ ತನ್ನ ತಾಯಿ ಸುಗಾ ಬೇಗಂ ನನ್ನು ಭೇಟಿ ಮಾಡಿಸಿದ್ದಾನೆ. ಮದುವೆಗೆ ಮುನ್ನವೇ ಮಗು ಆಗುವ ವಿಚಾರ ಜನರಿಗೆ ತಿಳಿದರೆ, ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಹೇಳಿ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಸುಗಾ ಬೇಗಂ ಹೇಳಿದ್ದಾಳೆ.

ಯುವತಿ ಹೇಳಿದ್ದೇನು?

ಘಟನೆಯ ಬಳಿಕ 2021ರ ಸೆಪ್ಟಂಬರ್ 18ರಂದು ಇಬ್ಬರಿಗೂ ಗ್ವಾಲಿಯರ್‌ನ ಖಾಸಗಿ ಹೋಟೆಲೊಂದರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿದ್ದಾರೆ. ಕೆಲ ದಿನಗಳವರೆಗೆ ಚೆನ್ನಾಗಿದ್ದ ಸಂಸಾರದಲ್ಲಿ ಮತ್ತೆ ಬಿರುಗಾಳಿ ಎದ್ದಿತು. ಇಮ್ರಾನ್‌ಖಾನ್ ಸಹೋದರ ಪುನ್ನಿಖಾನ್ ಹಾಗೂ ದೇವರ್ ಅಮನ್ ಖಾನ್ ಇಬ್ಬರೂ ನನ್ನ ಮೇಲೆ ಅತ್ಯಾಚಾರ ಎಸಗಿದರು. ಇದನ್ನೇ ಕೆಲದಿನ ಮುಂದುವರಿಸಿದರು. ಈ ವಿಷಯವನ್ನು ಸುಗಾಬೇಗಂ ಗೆ ತಿಳಿಸಿದಾಗ ಆಕೆ ತಮಾಷೆ ಮಾಡಿ ಎಲ್ಲವನ್ನು ಮರೆಸಿದರು ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.

ಇನ್ನೂ ಹಿಂದೂ ಪದ್ಧತಿಯಂತೆ ಮಾಡಿದ ಮದುವೆ ತನ್ನ ಧರ್ಮದಲ್ಲಿ ಮಾನ್ಯವಾಗಿಲ್ಲ, ಹಾಗಾಗಿ ಮುಸ್ಲಿಂ ಪದ್ಧತಿಯಂತೆ ಮದುವೆಯಾಗಬೇಕು ಎಂದು ಹೇಳಿ ಪುನಃ ಮದುವೆ ಮಾಡಿಸಿದ ಮೌಲ್ವಿಯೂ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ತನ್ನ ಪತಿಯೇ ಇದಕ್ಕೆ ಕಾವಲಾಗಿ ನಿಂತಿದ್ದನು ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಏಪ್ರಿಲ್ 20ರಂದು ಎಂದಿನಂತೆ ಇಮ್ರಾನ್‌ಖಾನ್ ಸಹೋದರ ಪುನ್ನಿ ಖಾನ್ ಕೋಣೆಗೆ ಬಂದು ಅತ್ಯಾಚಾರ ನಡೆಸಿದ ಬಳಿಕ ಕೋಣೆಯ ಬಾಗಿಲು ತೆರೆದು ಹೋಗಿದ್ದಾನೆ. ಇದರಿಂದಾಗಿ ನಾನು ತಪ್ಪಿಸಿಕೊಂಡು ತನ್ನ ಸಹೋದರಿಯ ಮನೆಗೆ ಓಡಿ ಬಂದೆ. ಘಟನೆ ತಿಳಿದ ಬಳಿಕ ಸಂತ್ರಸ್ತೆಯ ಸಂಬಂಧಿಕರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ, ಕುಟುಂಬದವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

You may also like

Leave a Comment