Home » Love Jihad: ಒಡ ಹುಟ್ಟಿದ ಸಹೋದರಿಯರಿಬ್ಬರ ದುರಂತ ಅಂತ್ಯ, ಇಲ್ಲೂ ನಡೆದಿತ್ತಾ ಲವ್ ಜಿಹಾದ್ ?

Love Jihad: ಒಡ ಹುಟ್ಟಿದ ಸಹೋದರಿಯರಿಬ್ಬರ ದುರಂತ ಅಂತ್ಯ, ಇಲ್ಲೂ ನಡೆದಿತ್ತಾ ಲವ್ ಜಿಹಾದ್ ?

by ಹೊಸಕನ್ನಡ
0 comments
Love Jihad

Love Jihad: ಪ್ರೀತಿಸಿದ ಯುವಕರೊಂದಿಗೆ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ ಎನ್ನುತ್ತಾ ಯುವತಿಯರಿಬ್ಬರು ಬಾವಿಗೆ ಹಾರಿ ಸಾವಿಗೆ ಶರಣಾದ ದುರಂತ ಘಟನೆಯೊಂದು ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದ್ದು, ಸಾವಿನ ಸುತ್ತ ಲವ್ ಜಿಹಾದ್ ಮಾತು (Love Jihad) ಕೇಳಿ ಬಂದಿದೆ.

ಮೃತ ಯುವತಿಯರನ್ನು ಪಿ. ಗಾಯತ್ರಿ(23) ಹಾಗೂ ಪಿ.ವಿದ್ಯಾ(21) ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಜಿಲ್ಲೆಯ ಜವಳಿ ಮಳಿಗೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.

ಘಟನೆ ವಿವರ:
ಮೃತ ಯುವತಿಯರಿಬ್ಬರೂ ಒಡಹುಟ್ಟಿದವರಾಗಿದ್ದು, ಕೆಲ ವರ್ಷಗಳಿಂದ ಜಿಲ್ಲೆಯ ಜವಳಿ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದರು. ಇದೇ ವೇಳೆ ಅಲ್ಲೇ ಕೆಲ್ಸಕ್ಕಿದ್ದ ಅನ್ಯಧರ್ಮದ ಯುವಕರ ಮಧ್ಯೆ ಪ್ರೇಮಾಂಕುರವಾಗಿದ್ದು, ಮದುವೆಯ ಮಾತು ಬಂದಾಗ ಮನೆಯಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

ಆ ಬಳಿಕ ಊರಿನ ಜಾತ್ರೆ ನಿಮಿತ್ತ ಮನೆಗೆ ಬಂದಿದ್ದ ಯುವತಿಯರು ಮತ್ತೆ ಫೋನ್ ನಲ್ಲಿ ಮಾತನಾಡುವುದನ್ನು ಗಮನಿಸಿದ್ದ ಹೆತ್ತವರು ಮತ್ತೊಮ್ಮೆ ವಿರೋಧ ವ್ಯಕ್ತಪಡಿಸಿ ಬುದ್ಧಿ ಮಾತು ಹೇಳಿದ್ದರು ಎನ್ನಲಾಗಿದೆ. ಇದಾದ ಬಳಿಕ ಕಳೆದ ಮಂಗಳವಾರ ಸಂಜೆ ವೇಳೆಗೆ ಮನೆಯಿಂದ ಹೊರಗಡೆ ತೆರಳಿದ ಯುವತಿಯರು ಹೊತ್ತು ಕಳೆದರೂ ವಾಪಸ್ಸು ಬಾರದೆ ಇದ್ದಾಗ ಗಾಬರಿಗೊಂಡ ಪೋಷಕರು ಹಾಗೂ ಸಂಬಂಧಿಕರು ಎಲ್ಲೆಡೆ ಹುಡುಕಾಡಿದ್ದು, ಕೆಲ ಹೊತ್ತಿನ ಬಳಿಕ ಮನೆಯಿಂದ ಕೆಲ ದೂರದಲ್ಲಿರುವ ಬಾವಿಯೊಂದರ ಬಳಿ ಮೊಬೈಲ್ ಪತ್ತೆಯಾಗಿದ್ದು, ಬಳಿಕ ಇಬ್ಬರ ಮೃತದೇಹವೂ ಪತ್ತೆಯಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಮೃತದೇಹವನ್ನು ಬಾವಿಯಿಂದ ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು,ಒಬ್ಬಾಕೆ ತನ್ನ ಹೆಸರನ್ನು ಹಾಗೂ ಇನ್ನೊಬ್ಬಾಕೆ ತನ್ನ ಸಹೋದರನ ಮೊಬೈಲ್ ಸಂಖ್ಯೆಯನ್ನು ಕೈಯ್ಯಲ್ಲಿ ಬರೆದುಕೊಂಡಿದ್ದರು ಎಂದು ವರದಿ ಹೇಳಿದೆ. ಸದ್ಯ ಸಹೋದರಿಯರಿಬ್ಬರ ಸಾವಿನ ಸುದ್ದಿ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಅನ್ಯ ಧರ್ಮದ ಯುವಕರ ಪ್ರೀತಿಯ ವಿಚಾರವೂ ಬಯಲಾಗಿದೆ. ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದೇ ಸಾವಿಗೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಹಿಂದೂ ಯುವತಿಯರನ್ನು ಬಲೆಗೆ ಬೀಳಿಸಿ ಪ್ರಾಣ ತೆಗೆಯುವ ಕೃತ್ಯಗಳು ಲವ್ ಜಿಹಾದ್ ನಿಂದ ನಡೆಯುತ್ತಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ, ಈ ಬಗ್ಗೆ ಹೆಚ್ಚಿನ ತನಿಖೆಯಾಗಬೇಕು ಹಾಗೂ ಸಾವಿನ ಹಿಂದೆ ಅನ್ಯಧರ್ಮದ ಯುವಕರ ಕಿರುಕುಳ, ಪ್ರಚೋದನೆ ಇರಬಹುದು ಎಂಬಿತ್ಯಾದಿ ಅನುಮಾನಗಳು ಸ್ಥಳೀಯವಾಗಿ ಹೆಚ್ಚಿದೆ.

 

ಇದನ್ನು ಓದಿ: Dr. G parameshwar: ಪೋಲೀಸರು ಕುಂಕುಮ, ವಿಭೂತಿ ಹಚ್ಚುವಂತಿಲ್ಲ ಎಂದು ನಾನು ಯಾವುದೇ ಹೇಳಿಕೆ ನೀಡಿಲ್ಲ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ- ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ!! 

You may also like

Leave a Comment