Home » Love Marriage: ಹಿಂದೂ ಯುವಕ-ಮುಸ್ಲಿಂ ಯುವತಿ ವಿವಾಹ;

Love Marriage: ಹಿಂದೂ ಯುವಕ-ಮುಸ್ಲಿಂ ಯುವತಿ ವಿವಾಹ;

0 comments

Chikkaballapura: ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಂ ಯುವತಿ ಮತ್ತು ಹಿಂದೂ ಯುವಕ ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಘಟನೆ ನಡೆದಿದೆ. ಈ ವಿವಾಹಕ್ಕೆ ಇಬ್ಬರ ಮನೆಯವರ ವಿರೋಧವಿದ್ದ ಕಾರಣ ಪ್ರೀತಿ ಮಾಡುತ್ತಿದ್ದ ಈ ಜೋಡಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ನಂತರ ಪೊಲೀಸರ ಸಂಧಾನದ ನಂತರವೂ ಪೋಷಕರು ಈ ಮದುವೆಗೆ ಒಪ್ಪಲಿಲ್ಲ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮೈಲಪ್ಪನಹಳ್ಳಿ ಗ್ರಾಮದ ನಿವಾಸಿ ಪಸೀಹಾ ಎಂಬ ಯುವತಿ ತನ್ನ ಎದುರು ಮನೆಯ ಹಿಂದೂ ಯುವಕ ನಾಗಾರ್ಜುನನ್ನು ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ನಾಗಾರ್ಜು ಹಾಗೂ ಪಸೀಹಾ ಪೋಷಕರ ವಿರೋಧದ ನಡುವೆ ದೇವಸ್ಥಾನದಲ್ಲಿ ವಿವಾಹವಾಗಿದ್ದು, ಪೋಷಕರ ವಿರೋಧವಿದ್ದ ಕಾರಣ ರಕ್ಷಣೆ ಕೊಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

You may also like