Home » Mandya: ಲವ್‌-ಸೆ*-ದೋಖಾ- ತಾಯಿ ಮಗಳು ಸಾವು!

Mandya: ಲವ್‌-ಸೆ*-ದೋಖಾ- ತಾಯಿ ಮಗಳು ಸಾವು!

0 comments

Mandya: ಮಗಳು ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಶರಣಾದ ಕೆಲವೇ ದಿನಗಳಲ್ಲಿ ತಾಯಿ ಕೂಡಾ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದಲ್ಲಿ ನಡೆದಿದೆ.

ಯುವತಿ ಓರ್ವನ ಲವ್‌…ಸೆ*ಕ್ಸ್‌ ದೋಖಾಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೀಗ ಒಂದೇ ಕುಟುಂಬದ ಇಬ್ಬರು ಸಾವಿಗೀಡಾಗಿದೆ. ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವಿಜಯಲಕ್ಷ್ಮಿ (21) ಎಂಬಾಕೆ ಮಾರಸಿಂಗನಹಳ್ಳಿಯ ಹರಿಕೃಷ್ಣ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ಆತ ಈಕೆಗೆ ಮೋಸ ಮಾಡಿ ಮದುವೆಯಾಗಲು ನಿರಾಕರಿಸಿದ್ದು, 20 ದಿನಗಳ ಹಿಂದೆ ವಿಜಯಲಕ್ಷ್ಮೀ ರೈಲಿನಡಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರೀತಿ ಎಂದು ಹೇಳುತ್ತಾ ಇವರಿಬ್ಬರ ನಡುವೆ ದೈಹಿಕ ಸಂಪರ್ಕ ಕೂಡಾ ನಡೆದಿತ್ತು. ಆದರೆ ಇತ್ತೀಚೆಗೆ ಹರಿಕೃಷ್ಣ ಬೇರೆ ಹುಡುಗಿಯರ ಜೊತೆ ಓಡಾಡುತ್ತಿದ್ದು, ಇದನ್ನು ಪ್ರಶ್ನೆ ಮಾಡಿದ ವಿಜಯಲಕ್ಷ್ಮೀ ಮದುವೆಗೆ ಪಟ್ಟು ಹಿಡಿದಿದ್ದಳು. ಆದರೆ ಮದುವೆಗೆ ಹರಿಕೃಷ್ಣ ನಿರಾಕರಣೆ ಮಾಡಿ, ಬೆದರಿಸಿದ್ದ ಎಂದು ಆರೋಪಿಸಲಾಗಿದೆ.

ಇತ್ತ ವಿಜಯಲಕ್ಷ್ಮೀ ತಾಯಿ ತನ್ನ ಮಗಳ ಸಾವಿಗೆ ನ್ಯಾಯ ಕೊಡಿ ಎಂದು ಒತ್ತಾಯಿಸಿ ಮಂಡ್ಯ ಗ್ರಾಮಾಂತರ ಠಾಣೆಗೆ ದೂರನ್ನು ನೀಡಿದ್ದರು. ತಂದೆ ನಂಜುಂಡೇಗೌಡ ಅವರು ಕೂಡಾ ಇದ್ದರು. ಆದರೆ ದೂರು ಕೊಡಲು ಹೋದವರ ವಿರುದ್ಧವೇ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದರು. ಇದರಿಂದ ನೊಂದ ತಾಯಿ ಲಕ್ಷ್ಮೀ ಗುರುವಾರ (ಮಾ.13) ಸಂಜೆ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ.

ಶವ ಸಾಗಿಲು ಬಿಡದೆ ಕುಟುಂಬದವರು, ಗ್ರಾಮಸ್ಥರು ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

You may also like