Home » ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ಜೈಲು ಸೇರಿದ ಕಾಲೇಜ್ ಹುಡುಗ|ವಿಚಾರಣೆಯಲ್ಲಿದ್ದ ಖೈದಿ ಜೈಲಿನಲ್ಲಿಯೇ ಆತ್ಮಹತ್ಯೆ

ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ಜೈಲು ಸೇರಿದ ಕಾಲೇಜ್ ಹುಡುಗ|ವಿಚಾರಣೆಯಲ್ಲಿದ್ದ ಖೈದಿ ಜೈಲಿನಲ್ಲಿಯೇ ಆತ್ಮಹತ್ಯೆ

0 comments

ಗದಗ:ಪ್ರೀತಿ ಮಾಡಿದ ತಪ್ಪಿಗೆ ಜೈಲು ಸೇರಿದ್ದ ಖೈದಿಯೊಬ್ಬ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಖೈದಿಯನ್ನು ತಾಲೂಕಿನ ಅಡವಿಸೋಮಾಪುರ ನಿವಾಸಿ 19 ವರ್ಷದ ರಾಜು ಲಮಾಣಿ ಎಂದು ಗುರುತಿಸಲಾಗಿದೆ.

ಪಿಯು ಕಾಲೇಜಿನಲ್ಲಿ ಓದುತ್ತಿದ್ದ ರಾಜು,ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದ.ಈ ವಿಚಾರವಾಗಿ ರಾಜು ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ರಾಜು ಜೈಲು ಪಾಲಾಗಿದ್ದ.ಇದೀಗ ಏಕಾಏಕಿ ಜೈಲಿನಲ್ಲಿಯೇ ರಾಜು ಆತ್ಮಹತ್ಯೆಗೆ ಶರಣಾಗಿದ್ದು, ಜೈಲು ಸಿಬ್ಬಂದಿಯ ನಿರ್ಲಕ್ಷವೇ ಆತ್ಮಹತ್ಯೆಗೆ ಕಾರಣ ಎಂದು ರಾಜು ಪೋಷಕರು ಆರೋಪಿಸಿದ್ದಾರೆ.

You may also like

Leave a Comment