Home » ಮದುವೆ ನಿರಾಕರಿಸಿದ ಪ್ರೇಯಸಿಯನ್ನು ಕೊಂದು ತಾನೂ ನೇಣಿಗೆ ಕೊರಳೊಡ್ಡಿದ ಪ್ರಿಯಕರ!

ಮದುವೆ ನಿರಾಕರಿಸಿದ ಪ್ರೇಯಸಿಯನ್ನು ಕೊಂದು ತಾನೂ ನೇಣಿಗೆ ಕೊರಳೊಡ್ಡಿದ ಪ್ರಿಯಕರ!

0 comments

ಪ್ರೀತಿ ಅಮರ ಅನ್ನೋ ಮಾತಿದೆ. ಆದ್ರೆ ಕೆಲವೊಂದು ಬಾರಿ ಅದು ಸುಳ್ಳದಾಗ, ‘ಪ್ರೀತಿ’ಯೇ ದ್ವೇಷವಾಗಿ ಹುಟ್ಟಿಕೊಂಡು ಅದೆಷ್ಟೋ ಜೀವಗಳೇ ಹೋಗಿದೆ. ತಾನು ಪ್ರೀತಿಸಿದಾಕೆ ಕೈ ಕೊಟ್ಟಳೆಂಬ ಕಾರಣಕ್ಕೊ, ಅಥವಾ ಬೇರೆ ಮದುವೆಯಾದಳೆಂಬ ಕಾರಣಕ್ಕೆ ಬರ್ಬರವಾಗಿ ಹತ್ಯೆಗೈದಿರುವ ಘಟನೆ ವರದಿಯಾಗುತ್ತಲೇ ಇದೆ. ಇದೀಗ ಅದೇ ರೀತಿಯ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ವರದಿಯಾಗಿದೆ.

ಹೌದು. ಪ್ರೀತಿಸಿದ ಯುವತಿ ಮದುವೆ ನಿರಾಕರಿಸಿದಳೆಂಬ ಕಾರಣಕ್ಕೆ ಆಕೆಯನ್ನು ಕೊಂದು, ಬಳಿಕ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತರು ಬೆಳಗಾವಿಯ ಬಸವಕಾಲೋನಿಯ ರೇಣುಕಾ ಹಾಗೂ ಆಕೆಯ ಪ್ರಿಯಕರ ರಾಮಚಂದ್ರ.

ಯುವಕ ಬಸವಂತಪ್ಪ ಸವದತ್ತಿಯ ಮೂಲದವನಾಗಿದ್ದರಿಂದ, ಯುವತಿ ರೇಣುಕಾ ರಾಮಚಂದ್ರನೊಂದಿಗೆ ಮದುವೆಗೆ ಒಪ್ಪಿರಲಿಲ್ಲ. ಹೀಗಾಗಿ, ಕೋಪಗೊಂಡ ಪ್ರಿಯಕರ ರೇಣುಕಾಳನ್ನು ಕೊಲೆ ಮಾಡಿ, ಡೆತ್ ನೋಟ್ ಬರೆದಿಟ್ಟು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ.

ಕೊಲೆಯಾದ ಯುವತಿ ರೇಣುಕಾ ಬೆಳಗಾವಿಯಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯು ಎಪಿಎಂಸಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.

You may also like

Leave a Comment