ಹಿಜಾಬ್ ಪ್ರಕರಣದ ಕಾವು ತಗ್ಗುತ್ತಿದ್ದಂತೆ ಇದೀಗ ಲವ್ ಜಿಹಾದ್ ಪ್ರಕರಣದ ಬಲೆಯಲ್ಲಿ ಸಿಲುಕಿ ಹಿಂದು ಮಹಿಳೆಯರು ಮೃತ ಪಡುತ್ತಿರುವ ಪ್ರಕರಣ ದಿನಂಪ್ರತಿ ವರದಿಯಾಗುತ್ತಲೇ ಇವೆ. ಲವ್ ಜಿಹಾದ್ ಎಗ್ಗಿಲ್ಲದೆ ನಡೆಯುತ್ತಿದ್ದು, ಮತಾಂತರ ಮಾಡುವ ಪ್ರಕ್ರಿಯೆ ಜೋರಾಗಿಯೇ ನಡೆಯುತ್ತಿದೆ. ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಜಗತ್ತು ಬೆಚ್ಚಿ ಬೀಳಿಸುವ ರೀತಿ ದೆಹಲಿಯ ಶ್ರದ್ದಾ ಪ್ರಕರಣ ವರದಿಯಾದ ಬೆನ್ನಲ್ಲೇ ಒಂದಲ್ಲ ಒಂದು ಲವ್ ಜಿಹಾದ್ ಪ್ರಕರಣದ ಜೊತೆಗೆ ಮಹಿಳೆಯರನ್ನು ಕೊಲ್ಲುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವುದು ವಿಪರ್ಯಾಸ.
ಮೃತ ನಿಧಿ, ಹಂತಕ ಸೂಫಿಯಾನ್ ನೆರೆಹೊರೆ ನಿವಾಸಿಗಳಾಗಿದ್ದು, ಮತಾಂತರಗೊಂಡು ನಿಖಾ ಆಗುವಂತೆ ನಿಧಿ ಮೇಲೆ ಒತ್ತಡ ಹೇರಲಾಗಿದೆ. ಇದಕ್ಕೆ ಆಕೆ ನಿರಾಕರಿಸಿದಾಗ ಅಪಾರ್ಟ್‌ಮೆಂಟ್ ಮೇಲಿಂದ ತಳ್ಳಿ ಹತ್ಯೆ ಮಾಡಲಾಗಿದೆ ಎಂದು ಯುವತಿಯ ತಾಯಿ ಆರೋಪಿಸಿದ್ದಾರೆ.
ಹೌದು!!! ಲಖನೌನಲ್ಲಿ (Lucknow) 19 ವರ್ಷದ ಹಿಂದೂ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರ ಅಪಾರ್ಟ್‌ಮೆಂಟ್‌ನ (Apartment) 4ನೇ ಅಂತಸ್ತಿನಿಂದ ನೂಕಿ ಕೊಂದು ಹಾಕಿದ ದುರ್ಘಟನೆ ನಡೆದಿದೆ. ನಿಧಿ ಗುಪ್ತಾ (Nidhi Gupta) ಎಂಬ ಯುವತಿಯನ್ನು ಮೊಹಮ್ಮದ್ ಸೂಫಿಯಾನ್ (Mohammad Sufiyan) ಎಂಬ ಬಾಯ್‌ಫ್ರೆಂಡ್ ಅಪಾರ್ಟ್‌ಮೆಂಟ್‌ನಿಂದ ಕೊಂದು ನೂಕಿದ್ದಾನೆ. ಹಿಂದೂ ಮಹಿಳೆ ನಿಧಿ ಮತಾಂತರಗೊಂಡು ನಿಖಾ ಎಂದಾಗಿದ್ದು, (ಮದುವೆಗೆ) (Marriage) ಆಗಲು ಆಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಂದಿರುವ ಅನುಮಾನದ ಜೊತೆಗೆ ಆರೋಪವು ಕೇಳಿಬರುತ್ತಿದೆ.
ನಿಧಿ ಬ್ಯೂಟಿಷಿಯನ್ ಆಗಲು ಇಚ್ಛಿಸಿದ್ದಳು ಎನ್ನಲಾಗಿದ್ದು, ಸೂಫಿಯಾನ್ ಹಾಗಿ ನಿಧಿ ಅಕ್ಕಪಕ್ಕದ ನಿವಾಸಿಗಳಾಗಿದ್ದರು. ನಿಧಿಯನ್ನು ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಲು ಸೂಫಿಯಾನ್ ಶತ ಪ್ರಯತ್ನ ನಡೆಸಿದ್ದಾನೆ ಎನ್ನಲಾಗಿದ್ದು , ಆಕೆಗೆ ಮುಸ್ಲಿಂ ಆಗಿ ಮತಾಂತರ ಆಗಲು ಹಾಗೂ ಮದುವೆ ಆಗಲು ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಇದರ ಜೊತೆಗೆ ಆಕೆಗೆ ಮೊಬೈಲ್ ಫೋನ್ ಕೊಡಿಸಿ ಸಂಪರ್ಕದಲ್ಲಿದ್ದ ಎಂದು ಕೂಡ ನಿಧಿ ಪೋಷಕರು ಆರೋಪಿಸಿದ್ದಾರೆ.
ಈ ವಿಷಯ ಗೊತ್ತಾದ ಕೂಡಲೇ ನಿಧಿ ಪೋಷಕರು ಸೂಫಿಯಾನ್ ಮನೆಗೆ ಹೋಗಿ, ಆತನ ಪಾಲಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ತಾರಕಕ್ಕೇರಿ, ನಿಧಿಯನ್ನು ಅಪಾರ್ಟ್‌ಮೆಂಟ್ ಮೇಲೆ ಎಳೆದೊಯ್ದ ಸೂಫಿಯಾನ್, ಆಕೆಯನ್ನು 4ನೇ ಅಂತಸ್ತಿನಿಂದ ತಳ್ಳಿ ಸಾಯಿಸಿದ ಕುರಿತಾಗಿ ಪೋಷಕರು ದೂರಿನಲ್ಲಿ ಹೇಳಿದ್ದು, ಜೊತೆಗೆ ತಮ್ಮ ಮಗಳು ಇಸ್ಲಾಂಗೆ ಮತಾಂತರ ಆಗಲು ಹಾಗೂ ಮದುವೆಗೆ ನಿರಾಕರಿಸಿದ್ದಾಳೆ. ಹಾಗಾಗಿಯೇ ಆರೋಪಿ ತಮ್ಮ ಮಗಳನ್ನು ಕೊಂದಿದ್ದಾನೆ ಎಂದು ಮೃತ ಯುವತಿಯ ಪೋಷಕರು ದೂರಿದ್ದಾರೆ.
ಇದೇ ವೇಳೆ, ನಿಧಿಯ ‘ವಿಡಿಯೋ’ವನ್ನು ಆತ ಇರಿಸಿಕೊಂಡಿದ್ದ ಎನ್ನಲಾಗಿದ್ದು, ಅದನ್ನು ಇರಿಸಿಕೊಂಡೆ ಬ್ಲಾಕ್ ಮೇಲ್ ಮಾಡುತ್ತಾ, ಮತಾಂತರದ ಬೇಡಿಕೆ ಇಟ್ಟಿದ್ದ ಎನ್ನಲಾಗುತ್ತಿದೆ.
ಯಾವುದೇ ಕೋಮು ಉದ್ವಿಗ್ನತೆ ಉಂಟಾಗದಂತೆ ಪೊಲೀಸರು ಹೆಚ್ಚಿನ ಜಾಗರೂಕತೆಯಿಂದ ಪ್ರಕರಣವನ್ನು ಭೇದಿಸುತ್ತಿದ್ದು, ಸದ್ಯ ಆರೋಪಿ ಸೂಫಿಯಾನ್, ತಲೆ ಮರೆಸಿಕೊಂಡು ಪರಾರಿಯಾಗಿದ್ದು, ಆರೋಪಿಯ ಪತ್ತೆಗೆ ಖಾಕಿ ಪಡೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
