Viral Video : ಪ್ರಣಯದ ಪ್ರೀತಿಗೋಸ್ಕರ ಪ್ರೇಮಿಗಳು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಎಂಬುದು ಸತ್ಯವಾದ ಮಾತು ಬಿಡ. ಯಾಕೆಂದರೆ ಇನ್ನೊಬ್ಬ ಪ್ರೇಮಿಯನ್ನು ಕಂಡರೆ ಇದು ನಿಜಕ್ಕೂ ಕೂಡ ಹೌದು ಎನಿಸುತ್ತದೆ. ಯಾಕಪ್ಪ? ಏನಾಯ್ತು? ಹೀಗೆ ಯಾಕೆ ಹೇಳ್ತಿದ್ದಾರೆ ಅಂತ ಅಂದುಕೊಳ್ಳುತ್ತಿದ್ದೀರಾ.. ನಾವು ಹೇಳೋದನ್ನ ಕೇಳಿದರೆ ನಿಮಗೆ ನಗಬೇಕೋ, ಅಳಬೇಕೋ ಎಂದು ಅನಿಸುವುದಿಲ್ಲ ಬಿಡಿ.
ಹೌದು, ಇನ್ನೊಮ್ಮೆ ಪ್ರಿಯತಮನೊಬ್ಬ ತನ್ನ ಪ್ರೇಯಸಿಯನ್ನು ಮೀಟ್ ಆಗಲು ಇಡೀ ಊರಿನ ಕರೆಂಟ್ ಕಟ್ ಮಾಡಿದ್ದ ಘಟನೆ ನೆನಪಿಸಿಕೊಳ್ಳಬಹುದು. ಇದೀಗ ಇಂಥದ್ದೇ ಒಂದು ಘಟನೆ ಮತ್ತೆ ಮರುಕಳಿಸಿದ್ದು ತನ್ನ ಲವರ್ ತನಗೆ ಯಾವುದೇ ರೀತಿಯ ಫೋನು, ಮೆಸೇಜು ಮಾಡಲಿಲ್ಲ ಎಂಬ ಕಾರಣಕ್ಕೆ ಪಾಗಲ್ ಪ್ರೇಮಿ ಒಬ್ಬ ಇಡೀ ಊರಿನ ಕರೆಂಟ್ ಕಟ್ ಮಾಡಿದ್ದಾನೆ.
ಯಸ್, ತನ್ನ ಪ್ರೇಯಸಿ ತನ್ನ ಮೊಬೈಲ್ ಕರೆಗೆ ಉತ್ತರಿಸುತ್ತಿಲ್ಲ ಎಂದು ಹತಾಶಗೊಂಡ ಪ್ರೇಮಿ ಇಡೀ ಗ್ರಾಮದ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿರುವ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯ ಪಕ್ಕದಲ್ಲಿಯೇ ನಡೆದ ಘಟನೆ ಎಂದು ಹೇಳುತ್ತಿದ್ದರು ಕೂಡ ನಿಜಕ್ಕೂ ಎಲ್ಲಿ ನಡೆದಿತ್ತು ಎಂಬುದರ ಕುರಿತು ಯಾವುದೇ ಸ್ಪಷ್ಟೀಕರಣವಿಲ್ಲ.
ಸಣ್ಣ ವಿಚಾರಕ್ಕೆ ಜಗಳ ಈ ಪ್ರೇಮಿಗಳು ಜಗಳ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿರುವಂತೆ ಯುವಕ ತನ್ನ ಪ್ರೇಯಸಿ ತನ್ನ ಮೊಬೈಲ್ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಹತಾಶೆಗೊಂಡಿದ್ದನು. ಸಾಕಷ್ಟು ಬಾರಿ ಕರೆ ಮಾಡಿದರೂ ಆಕೆ ತನ್ನ ಕರೆ ಸ್ವೀಕರಿಸುತ್ತಿಲ್ಲ. ಬದಲಿಗೆ ಆಕೆಯ ಫೋನ್ ಸತತವಾಗಿ ಎಂಗೇಜ್ ಬರುತ್ತಿದೆ ಎಂದು ಆಕ್ರೋಶಗೊಂಡಿದ್ದಾನೆ. ಇದಕ್ಕೆ ಕೋಪಗೊಂಡ ಯುವಕ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬ ಏರಿ ನೋಡ ನೋಡುತ್ತಲೇ ಹೈಟೆನ್ಷನ್ ವಿದ್ಯುತ್ ತಂತಿಗಳನ್ನು ಕತ್ತರಿಸಿ ಹಾಕಿದ್ದಾನೆ. ಯುವಕನ ಈ ಕೃತ್ಯದಿಂದ ಇಡೀ ಗ್ರಾಮಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.ಸ್ಥಳಕ್ಕೆ ಪೊಲೀಸರು ಕೂಡ ಭೇಟಿ ನೀಡಿದ್ದು, ಯುವಕನ ವಿಚಾರಣೆಗೆ ಒಳಪಡಿಸಿದ್ದಾರೆ.
Left Hand: ಎಡಗೈಯಲ್ಲಿ ಆಹಾರ ಸೇವಿಸಲು ಅಸಹ್ಯ ಅನಿಸುತ್ತಾ? ಆದ್ರೆ ಇದೆ ನೋಡಿ ಇಷ್ಟೆಲ್ಲಾ ಪ್ರಯೋಜನ
