Home » ಪ್ರೇಮಿಗಳಿಬ್ಬರ ಮದುವೆಗೆ ಮನೆಯಲ್ಲಿ ಒಪ್ಪಿದ್ದರೂ ವಿಧಿಯಾಟ ಬೇರೆಯಾಗಿತ್ತು!! ಮದುವೆಗೆ ಸಿದ್ಧವಾಗಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು!!

ಪ್ರೇಮಿಗಳಿಬ್ಬರ ಮದುವೆಗೆ ಮನೆಯಲ್ಲಿ ಒಪ್ಪಿದ್ದರೂ ವಿಧಿಯಾಟ ಬೇರೆಯಾಗಿತ್ತು!! ಮದುವೆಗೆ ಸಿದ್ಧವಾಗಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು!!

0 comments

ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ದರೆ ಇನ್ನೆರಡು ವರ್ಷಗಳಲ್ಲಿ ಆ ಜೋಡಿ ಹಸೆಮಣೆ ಏರಲಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿದ್ದರಿಂದ ಅವರಿಬ್ಬರ ಕನಸು ನುಚ್ಚುನೂರಾಗಿದೆ. ಪ್ರೀತಿಸುತ್ತಿದ್ದ ಜೋಡಿಯು ತಮ್ಮ ಪ್ರೀತಿಯೊಂದಿಗೆ ದುರಂತ ಅಂತ್ಯ ಕಂಡಿದೆ.

ಹೌದು,ಅವರಿಬ್ಬರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಅರೆಕ್ಷಣವೂ ಒಬ್ಬರನ್ನೊಬ್ಬರು ಬಿಟ್ಟಿರಲು ಇಬ್ಬರ ಮನಸ್ಸು ಒಪ್ಪುತ್ತಿರಲಿಲ್ಲ. ಅವರ ಎರಡು ವರ್ಷಗಳ ಪ್ರೀತಿಗೆ ಮನೆಯವರು ಕೂಡಾ ಒಪ್ಪಿಗೆ ಸೂಚಿಸಿ, ಆಕೆಯ ಓದು ಮುಗಿದ ಬಳಿಕ ಮದುವೆ ನಡೆಸಲು ನಿರ್ಧಾರಿಸಿದ್ದರು.ಆದರೆ ಅವರಿಬ್ಬರ ದುರಂತ ಮರಣದಿಂದಾಗಿ ಮಕ್ಕಳ ಮದುವೆಯ ಖುಷಿಯಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಕಲಬುರಗಿ ಜಿಲ್ಲೆಯ ಯುವತಿ ಶ್ರುತಿ ಹಾಗೂ ಆಕೆಯ ಪ್ರಿಯಕರ, ಸಂಬಂಧಿ ವಿಜಯಪುರ ಜಿಲ್ಲೆಯ ಹನುಮಂತ ಮೃತ ಪ್ರೇಮಿಗಳು. ಇವರಿಬ್ಬರ ಎರಡು ವರ್ಷದ ಪ್ರೀತಿಗೆ ಮನೆಯಿಂದಲೂ ಒಪ್ಪಿಗೆ ಸಿಕ್ಕಿತ್ತು. ಇನ್ನೇನು ಮಾದುವೆಯೂ ನಡೆಯುವುದಿತ್ತು. ಆದರೆ ವಿಧಿಯಾಟ, ಕಾಲು ಜಾರಿ ಬಾವಿಗೆ ಬಿದ್ದು ಹನುಮಂತ ಸಾವನ್ನಪ್ಪಿದ್ದ.

ಪ್ರಿಯಕರನ ಸಾವಿನ ಸುದ್ದಿ ತಿಳಿದ ಯುವತಿ ಶ್ರುತಿ ಮಾನಸಿಕವಾಗಿ ನೊಂದಿದ್ದಳು. ಊಟ, ನಿದ್ದೆ ಬಿಟ್ಟು ಕಣ್ಣೀರಿನಲ್ಲೇ ದಿನ ಕಳೆಯುತ್ತಿದ್ದ ಆಕೆ ಕಳೆದ ಗುರುವಾರ ನೇಣಿಗೆ ಶರಣಾಗಿದ್ದಾಳೆ. ಸದ್ಯ ಇಬ್ಬರ ಮನೆಯಲ್ಲೂ ಸೂತಕದ ಕರಿ ಛಾಯೆ ಆವರಿಸಿದ್ದು,ಪ್ರೀತಿ ಗೆದ್ದು ಅರಳುವ ಮೊದಲೇ ಇಬ್ಬರ ಸಾವಿನೊಂದಿಗೆ ಬಾಡಿಹೋಗಿತ್ತು.

You may also like

Leave a Comment