Home » ಐದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಜೋಡಿಯ ದುರಂತ ಅಂತ್ಯ!!! ರಾತ್ರಿಯಾಗುತ್ತಲೇ ಊರು ಸೇರಿಕೊಂಡಿದ್ದ ಪ್ರೇಮಿಗಳು ಒಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಐದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಜೋಡಿಯ ದುರಂತ ಅಂತ್ಯ!!! ರಾತ್ರಿಯಾಗುತ್ತಲೇ ಊರು ಸೇರಿಕೊಂಡಿದ್ದ ಪ್ರೇಮಿಗಳು ಒಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು

0 comments

ಯುವ ಪ್ರೇಮಿಗಳ ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸುಮಾರು ಐದು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಜೋಡಿಯು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯು ಹುಣಸೂರು ತಾಲೂಕಿನ ಸಿಂಗರಮಾರನ ಹಳ್ಳಿಯಲ್ಲಿ ನಡೆದಿದೆ.

ಮೃತ ಪ್ರೇಮಿಗಳನ್ನು ಅದೇ ಗ್ರಾಮದವರಾದ ಅರ್ಚನಾ(17) ಹಾಗೂ ರಾಕೇಶ್(24) ಎಂದು ಗುರುತಿಸಲಾಗಿದೆ.

ಘಟನೆ ವಿವರ: ತನ್ನ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಸಿಂಗರಮಾರನ ಹಳ್ಳಿ ನಿವಾಸಿ ಕುಮಾರ್ ಐದು ತಿಂಗಳ ಹಿಂದೆ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.

ಇದಾದ ಒಂದು ವಾರದ ಬಳಿಕ ಯುವಕನ ತಂದೆಯೂ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅತ್ತ ಯುವಕ ಯುವತಿಯು ಒಂದೇ ಗ್ರಾಮದವರಾಗಿದ್ದರಿಂದ ಇಬ್ಬರೂ ಪ್ರೀತಿಸಿ ಓಡಿ ಹೋಗಿರಬಹುದೆಂದು ಶಂಕಿಸಲಾಗಿತ್ತು.

ಆದರೆ ಐದು ತಿಂಗಳ ಬಳಿಕ ರಾತ್ರಿ ಹೊತ್ತಲ್ಲಿ ಗ್ರಾಮಕ್ಕೆ ಬಂದ ಪ್ರೇಮಿಗಳು ಊರಿನ ಹೊರವಲಯದ ಜಮೀನೊಂದರಲ್ಲಿ ಇರುವ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರೇಮಿಗಳ ಆತ್ಮಹತ್ಯೆಯೋ ಕೊಲೆಯೋ ಎಂಬ ಸಂಶಯವೂ ವ್ಯಕ್ತವಾಗಿದೆ.

You may also like

Leave a Comment