3
ತನ್ನ ಪ್ರೀತಿ ತಿರಸ್ಕರಿಸಿದಳೆಂಬ ಕಾರಣಕ್ಕೆ ಕೋಪಗೊಂಡ ಪ್ರಿಯತಮ ಪ್ರಿಯತಮೆಯನ್ನು ಕೊಲ್ಲುವುದು, ಆಕೆಗೆ ಬೆದರಿಕೆ ಹಾಕುವುದು ಇಂತಹ ಹಲವು ಪ್ರಕರಣಗಳು ನಡೆದಿದೆ. ಆದರೆ ಇಲ್ಲೊಬ್ಬ ಪಾಗಲ್ ಪ್ರೇಮಿ, ತನ್ನ ಪ್ರೀತಿ ನಿರಾಕರಿಸಿದಳೆಂದು ಆಕೆಯ ಫೋನ್ ನಂಬರ್ ನ್ನು ಫೋರ್ನ್ ವೆಬ್ ಸೈಟ್ ಗೆ ಹಾಕಿ ಸೆಕ್ಸ್ ಟಾಯ್ಸ್ ಕಳುಹಿಸಿದ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ.
ಕಾಲೇಜು ವಿದ್ಯಾರ್ಥಿನಿಯಾದ ಯುವತಿಯು ಕಳೆದ ಕೆಲ ತಿಂಗಳಿನಿಂದ ತನಗೆ ಲೈಂಗಿಕ ಒಲವು ತೋರುವಂತೆ ಹಲವಾರು ಕರೆಗಳು ಬರುತ್ತಿದ್ದು, ಓರ್ವ ಅಪರಿಚಿತನಿಂದ ಸೆಕ್ಸ್ ಟಾಯ್ ಕೂಡಾ ಕೊರಿಯರ್ ಮುಖಾಂತರ ಬಂದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಳು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಯುವತಿಯ ಫೋನ್ ನಂಬರ್ ಫೋರ್ನ್ ವೆಬ್ಸೈಟ್ ಗೆ ಹಾಕಿರುವುದು ಹಾಗೂ ಕೊರಿಯರ್ ಬಂದಿರುವ ಮೂಲಗಳನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯ ತನಿಖೆ ನಡೆಯುತ್ತಿದ್ದು, ಮಾಹಿತಿ ತಂತ್ರಜ್ಞಾನ ಕಾಯಿದೆಯ ಅಡಿಯಲ್ಲಿ ಬಂಧಿಸಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
