ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಬಿಗ್ ನ್ಯೂಸ್ ಒಂದು ಇದೆ. ಒಂದು ವರ್ಷದಲ್ಲಿ ನೀವು ಎಷ್ಟು ಸಿಲಿಂಡರ್ಗಳನ್ನು ತೆಗೆದುಕೊಳ್ಳಬಹುದು? ಎಂಬುವುದಕ್ಕೆ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಿದೆ. ಒಂದು ವರ್ಷದಲ್ಲಿ ನೀವು ಎಷ್ಟು ಸಿಲಿಂಡರ್ಗಳಿಗೆ ಅರ್ಜಿ ಸಲ್ಲಿಸಬಹುದು?
ಗ್ರಾಹಕರಿಗೆ ಎಲ್ಪಿಜಿ ( LPG) ಸಿಲಿಂಡರ್ ಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಇನ್ನು ಮುಂದೆ ಯಾವುದೇ ಗ್ರಾಹಕರು ವರ್ಷಕ್ಕೆ 15 ಸಿಲಿಂಡರ್ ಗಳನ್ನು ಮಾತ್ರ ಬುಕ್ ಮಾಡಲು ಸಾಧ್ಯ. ಈಗ ನೀವು ಒಂದು ವರ್ಷದಲ್ಲಿ 15 ಸಿಲಿಂಡರ್ ಗಳಿಗಿಂತ ಹೆಚ್ಚು ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗೆ, ನೀವು ಒಂದು ತಿಂಗಳಲ್ಲಿ 2 ಸಿಲಿಂಡರ್ ಗಳಿಗಿಂತ ಹೆಚ್ಚು ತೆಗೆದುಕೊಳ್ಳಲು ಸಾಧ್ಯವಿಲ್ಲ.
ಈ ಸಿಲಿಂಡರ್ ತೆಗೆದುಕೊಳ್ಳಲು ಹೊಸ ನಿಯಮಗಳನ್ನು ಮಾಡಲಾಗಿದೆ. ಇದುವರೆಗೆ ಸಿಲಿಂಡರ್ ಪಡೆಯಲು ತಿಂಗಳುಗಳು ಅಥವಾ ವರ್ಷಗಳ ಕೋಟಾವನ್ನು ನಿಗದಿಪಡಿಸಲಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಒಂದು ವರ್ಷದಲ್ಲಿ ಸಬ್ಸಿಡಿ ಸಿಲಿಂಡರ್ಗಳ ಸಂಖ್ಯೆ 12 ಕ್ಕೆ ಏರಿದೆ, ನೀವು 15 ಸಿಲಿಂಡರ್ಗಳನ್ನು ತೆಗೆದುಕೊಂಡರೆ ನಿಮಗೆ 12ಕ್ಕೆ ಮಾತ್ರ ಸಬ್ಸಿಡಿ ಸಿಗುತ್ತದೆ
