Home » ಥೈಲ್ಯಾಂಡ್ ಗಡೀಪಾರು ನಂತರ ದೆಹಲಿಗೆ ಬಂದ ಲೂತ್ರಾ ಸಹೋದರರ ಬಂಧನ

ಥೈಲ್ಯಾಂಡ್ ಗಡೀಪಾರು ನಂತರ ದೆಹಲಿಗೆ ಬಂದ ಲೂತ್ರಾ ಸಹೋದರರ ಬಂಧನ

0 comments

ನವದೆಹಲಿ: ಗೋವಾ ಪೊಲೀಸರು ಮಂಗಳವಾರ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ನಿಯಂತ್ರಣದಲ್ಲಿ ಸಹೋದರರಾದ ಗೌರವ್ ಮತ್ತು ಸೌರಭ್ ಲುತ್ರಾ ಅವರನ್ನು ಔಪಚಾರಿಕವಾಗಿ ಬಂಧಿಸಿದ್ದಾರೆ.

ಡಿಸೆಂಬರ್ 6 ರಂದು ಸಂಭವಿಸಿದ ಬೆಂಕಿಯಲ್ಲಿ 25 ಜನರು ಸಾವನ್ನಪ್ಪಿದ ರೋಮಿಯೋ ಲೇನ್‌ನ ಗೋವಾ ನೈಟ್‌ಕ್ಲಬ್ ಬಿರ್ಚ್‌ನ ಮಾಲೀಕರಾಗಿರುವ ಇವರನ್ನು ವಶಕ್ಕೆ ಪಡೆಯಲು ಗೋವಾ ಪೊಲೀಸರ ವಿಶೇಷ ತಂಡ ವಿಮಾನ ನಿಲ್ದಾಣದಲ್ಲಿ ಹಾಜರಿತ್ತು. ದುರ್ಘನೆ ನಡೆದ ನಂತರ ಬೆಳಿಗ್ಗೆ ಸಹೋದರರು ಫುಕೆಟ್‌ಗೆ ಪಲಾಯನ ಮಾಡಿದ್ದರು. ಅವರ ಪಾಸ್‌ಪೋರ್ಟ್‌ಗಳನ್ನು ಅಮಾನತುಗೊಳಿಸುವಂತೆ ಭಾರತದ ವಿನಂತಿಯನ್ನು ಅನುಸರಿಸಿ, ಥಾಯ್ ಅಧಿಕಾರಿಗಳು ಅವರನ್ನು ಫುಕೆಟ್‌ನಲ್ಲಿರುವ ರೆಸಾರ್ಟ್‌ನಲ್ಲಿ ಬಂಧಿಸಿ ಮಂಗಳವಾರ ಬೆಳಿಗ್ಗೆ ಭಾರತಕ್ಕೆ ಗಡೀಪಾರು ಮಾಡಿದರು. 2015 ರಿಂದ ಜಾರಿಯಲ್ಲಿರುವ ಭಾರತ-ಥೈಲ್ಯಾಂಡ್ ಹಸ್ತಾಂತರ ಒಪ್ಪಂದಕ್ಕೆ ಅನುಗುಣವಾಗಿ ಭಾರತೀಯ ಕಾನೂನು ಜಾರಿ ಸಂಸ್ಥೆಗಳು ಈ ಪ್ರಕ್ರಿಯೆಯನ್ನು ಸಂಘಟಿಸಿದವು.

You may also like