Home » Madhu Bangarappa: ಓಪಿಎಸ್‌ ನಿರೀಕ್ಷೆಯಲ್ಲಿರುವ ಸರಕಾರಿ ನೌಕರರಿಗೆ ಸಿಹಿ ಸುದ್ದಿ

Madhu Bangarappa: ಓಪಿಎಸ್‌ ನಿರೀಕ್ಷೆಯಲ್ಲಿರುವ ಸರಕಾರಿ ನೌಕರರಿಗೆ ಸಿಹಿ ಸುದ್ದಿ

0 comments
Madhu Bangarappa

Madhu Bangarappa: ಸರಕಾರಿ ನೌಕರರಿಗೆ ಒಪಿಎಸ್‌ ಜಾರಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಎಸ್‌.ಮಧು ಬಂಗಾರಪ್ಪ ಹೇಳಿದ್ದಾರೆ.

ರಾಣೆಬೆನ್ನೂರಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ, ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿ ಮತ್ತು ಪ್ರತಿಭಾ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸುತ್ತಾ ಅವರು ಈ ಮಾತನ್ನು ಹೇಳಿದ್ದಾರೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಳ್ತಂಗಡಿ: ಕರೆಂಟ್ ಶಾಕ್’ಗೆ ಒಂದು ಕೈ, ಕಾಲು ಕಳಕೊಂಡ ವ್ಯಕ್ತಿಗೆ ಗಣೇಶ್ ಗೌಡ ಕಲಾಯಿ ಸಹಾಯ- 30 ಲಕ್ಷ ವೀಕ್ಷಣೆ ಪಡೆದ ವೈರಲ್ ವೀಡಿಯೋ!

ಒಪಿಎಸ್‌ ಜಾರಿ ಮಾಡುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಇಲಾಖೆಯಡಿ ರಾಜ್ಯಾದ್ಯಂತ 1.16 ಕೋಟಿ ಮಕ್ಕಳು ಅಧ್ಯಯನ ನಡೆಸುತ್ತಿದ್ದು, 56 ಸಾವಿರ ಸರಕಾರಿ ಶಾಲಾ, ಕಾಲೇಜುಗಳಿದೆ ಎಂದು ಹೇಳಿದರು. ಪರೀಕ್ಷಾ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವೆಬ್‌ಕಾಸ್ಟಿಂಗ್‌ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.

You may also like