Home » Madhya Pradesh: ಸೆಲ್ಫಿಗಾಗಿ ಹುಷಾರಿಲ್ಲದ ಚಿರತೆಗೆ ಕಿರುಕುಳ: IFS ಅಧಿಕಾರಿ ತೀವ್ರ ಆಕ್ರೋಶ!!!

Madhya Pradesh: ಸೆಲ್ಫಿಗಾಗಿ ಹುಷಾರಿಲ್ಲದ ಚಿರತೆಗೆ ಕಿರುಕುಳ: IFS ಅಧಿಕಾರಿ ತೀವ್ರ ಆಕ್ರೋಶ!!!

0 comments
Madhya Pradesh News

Madhya Pradesh: ಗ್ರಾಮಸ್ಥರು ಸೆಲ್ಫಿಗಾಗಿ ಹುಷಾರಿಲ್ಲದ ಚಿರತೆಗೆ ಕಿರುಕುಳ ನೀಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಮಲ್ವಾ ಪ್ರದೇಶದ ದೇವಸ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ (IFS Officer) ಪರ್ವಿನ್ ಕಸ್ವಾನ್ ಅವರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಜನರ ವರ್ತನೆ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ಟಿಗರು ಕಿಡಿಕಾರಿದ್ದಾರೆ.

ವೀಡಿಯೋದಲ್ಲಿ ಚಿರತೆ ಹೋಗುತ್ತಿರುವ ವೇಳೆ ಅದರ ಬೆನ್ನು ಸವರುತ್ತ ಓರ್ವ ಹೋಗುತ್ತಿದ್ದೊನೆ. ಅವನ ಜೊತೆಗೆ ಊರವರು ಕೂಡ ಸಾಗುತ್ತಿದ್ದಾರೆ. ಯುವಕ ಚಿರತೆಯ ಬೆನ್ನ ಮೇಲೆ ಕೈ ಹಾಕಿ ಹಿಡಿದುಕೊಂಡಿರುವ ಕಾರಣಕ್ಕೆ ಚಿರತೆಗೆ ನಡೆಯಲು ಕಷ್ಟವಾಗುತ್ತಿದ್ದು, ಅದು ಕಾಲೆಳೆಯುತ್ತಾ ಮುಂದೆ ಸಾಗುತ್ತಿದೆ. ಸದ್ಯ ಈ ದೃಶ್ಯವನ್ನು ವಿಡಿಯೋ ಮೂಲಕ ಸೆರೆಹಿಡಿಯಲಾಗಿದ್ದು, ಭಾರೀ ವೈರಲ್ ಆಗಿದೆ.

ಕಸ್ವಾನ್ (Parveen Kaswan) ಅವರು ಈ ವಿಡಿಯೋ ಪೋಸ್ಟ್ ಮಾಡಿ, ಈ ವೀಡಿಯೋದಲ್ಲಿ ಮನುಷ್ಯರನ್ನು ಗುರುತಿಸಿ, ಈ ರೀತಿ ವನ್ಯಜೀವಿಗಳಿಗೆ ತೊಂದರೆ ನೀಡಬೇಡಿ ಅವುಗಳು ಸಿಟ್ಟಿಗೆದ್ದರೆ ಬಲು ಅಪಾಯಕಾರಿ ಎಂದು ಬರೆದಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಮನುಷ್ಯರ ಈ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿವಿಧ ರೀತಿಯ ಕಾಮೆಂಟ್ ಮಾಡಿ ತಮ್ಮ ಬೇಸರ, ಕೋಪ ಹೊರಹಾಕಿದ್ದಾರೆ.

ಇದನ್ನೂ ಓದಿ : ಸೌಜನ್ಯ ಧರ್ಮಸ್ಥಳ – ಬೆಂಗಳೂರು ಪಾದಯಾತ್ರೆ

You may also like

Leave a Comment