Murder: ಕಾಣೆಯಾದ ಗುಲಾಬ್ ದೇವಿ ಸಿಕ್ಕಿದ್ದು ಮಾತ್ರ ಒಂದು ತಿಂಗಳ ನಂತರ. ಹೌದು, ಗುಲಾಬ್ ದೇವಿ ಹತ್ಯೆ ಪ್ರಕರಣವನ್ನು ಪೊಲೀಸರು ಇದೀಗ ಭೇದಿಸಿದ್ದಾರೆ. ಈ ಕೊಲೆಯ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಗುಲಾಬ್ ದೇವಿ ಹತ್ಯೆ (Murder) ಪ್ರಕರಣವನ್ನು ನಿವಾರಿ ಪೊಲೀಸರು ಬಯಲಿಗೆಳೆದಿದ್ದು, ಆಕೆಯನ್ನು ತನ್ನ ಪ್ರಿಯಕರನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪ್ರೇಮಿ ಆಕೆಗೆ ವಿಷಪೂರಿತ ಮದ್ಯ ಕುಡಿಸಿದ್ದು, ಇದನ್ನು ಕುಡಿದು ಆಕೆ ಸಾವನ್ನಪ್ಪಿದಾಗ ಆಕೆಯ ಶವವನ್ನು ಜಮೀನಿನಲ್ಲಿ ಹೂತು ಹಾಕಿದ್ದ. ಬಳಿಕ ಬರೋಬ್ಬರಿ ಒಂದು ತಿಂಗಳವರೆಗೆ ಆತ ಆಕೆಯನ್ನು ಹೂತು ಹಾಕಿದ ಸ್ಥಳದಲ್ಲೇ ಕಾವಲು ಕೂತು, ಸಂದರ್ಭ ನೋಡಿ ಒಂದು ತಿಂಗಳ ನಂತರ ಆಕೆಯ ಶವವನ್ನು ಹೊರತೆಗೆದು ಮೋರಿ ಬಳಿ ಎಸೆದಿದ್ದಾನೆ.
ವಾಸ್ತವವಾಗಿ, ಜೂನ್ 3 ರಂದು, ಕಾಶಿಪುರದ ನಿವಾಸಿ ಕಾಳಿಚರಣ್ ಪಾಲ್ ಅವರು ತಮ್ಮ ಪತ್ನಿ ಗುಲಾಬ್ ದೇವಿ ಪಾಲ್ ನಾಪತ್ತೆಯಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಈ ಮಹಿಳೆಗಾಗಿ ವಾರಗಳ ಕಾಲ ತೀವ್ರ ಹುಡುಕಾಟ ನಡೆಸುತ್ತಿದ್ದಾಗ, ಸಿನುನಿ ಕಾಡಿನ ಮೋರಿ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗುತ್ತದೆ. ನಂತರ ಪೊಲೀಸರು ಕಾಳಿಚರಣ್ ಹಾಗೂ ಆತನ ಕುಟುಂಬಸ್ಥರನ್ನು ಕರೆಸಿ ಮೃತದೇಹವನ್ನು ಗುರುತಿಸಿದ್ದಾರೆ.
ಇದಾದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಲ್ಲರ ಹೇಳಿಕೆಯನ್ನೂ ಪಡೆದುಕೊಂಡಿದ್ದಾರೆ. ಅಷ್ಟರಲ್ಲಿ ಮಹಿಳೆಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಈ ಮೊಬೈಲ್ ಇರುವ ಸ್ಥಳ ಮತ್ತೆ ಮತ್ತೆ ಬದಲಾಗುತ್ತಿತ್ತು. ನಂತರ ಪೊಲೀಸರು ಮೊಬೈಲ್ ಟವರ್ ಟ್ರೇಸ್ ಮಾಡಿ ಮಹಿಳೆಯ ಸ್ನೇಹಿತ ಮದನ್ ಕುಶ್ವಾಹಾ ಅವರನ್ನು ತಲುಪಿದರು. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು. ವಿಚಾರಣೆ ವೇಳೆ ಪೊಲೀಸರ ಮುಂದೆಯೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಘಟನೆಯ ಗುಟ್ಟನ್ನು ಬಿಚ್ಚಿಟ್ಟಿದ್ದಾನೆ.
ಹಣದ ವಿಚಾರದಲ್ಲಿ ಅವರಿಬ್ಬರಿಗೆ ಜಗಳ ಉಂಟಾಗಿದ್ದು, ಗುಲಾಬ್ ತನಗೆ ಇಂತಿಷ್ಟು ಹಣ ಬೇಕು ಎಂದು ಹಠ ಹಿಡಿದಿದ್ದಳು. ಇದಕ್ಕೆ ಒಪ್ಪದ ಮಹಿಳೆ ಯುವಕನ ಹಿಂದೆ ಹೋಗಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ತಿಳಿದು ಬಂದಿದೆ.
