Home » Madikeri: Madikeri: ಪುತ್ತೂರಿಗೆ ಗಾಂಜಾ ಸಾಗಾಟ: ಪಲ್ಟಿಯಾದ ಕಾರಿನಿಂದ ಸತ್ಯ ಬಯಲು!

Madikeri: Madikeri: ಪುತ್ತೂರಿಗೆ ಗಾಂಜಾ ಸಾಗಾಟ: ಪಲ್ಟಿಯಾದ ಕಾರಿನಿಂದ ಸತ್ಯ ಬಯಲು!

0 comments

Madikeri: ಚಾಲಕನ ನಿಯಂತ್ರಣ ತಪ್ಪಿದ ಕಾರು ಮಗುಚಿಕೊಂಡ ಪರಿಣಾಮ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ.

ಪಿರಿಯಾಪಟ್ಟಣದಿಂದ ಮಡಿಕೇರಿ (Madikeri) ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ಕಾರು ಮಾರ್ಗಮಧ್ಯದ
ದೇವರಕೊಲ್ಲಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು
ಪಲ್ಟಿಯಾಗಿದೆ. ಈ ಸಂದರ್ಭ ನೆರವಿಗೆ ಧಾವಿಸಿ ಬಂದ ಸ್ಥಳೀಯ ರಿಗೆ ಕಾರಿನಲ್ಲಿ ಗಾಂಜಾ ಪ್ಯಾಕೇಟ್ ಗಳು ಪತ್ತೆಯಾಗಿವೆ. ಕೂಡಲೇ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ನಂತರ ಪುತ್ತೂರು (Puttur) ನಿವಾಸಿಗಳಾದ ಫಜ್ಲುದ್ದೀನ್, ಮುಷ್ತಾಕ್, ಜಾಬಿರ್ ಎಂಬುವವರನ್ನು ಮತ್ತು ಗಾಂಜಾ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

You may also like