Home » Maharatstra: ಕಳೆದ ವರ್ಷ ಮೋದಿ ಅನಾವರಣಗೊಳಿಸಿದ್ದ ಶಿವಾಜಿ ಪ್ರತಿಮೆ ಕುಸಿತ – ಒಂದು ವರ್ಷದೊಳಗೆ ಹೇಳ ಹೆಸರಿಲ್ಲದಂತೆ ದ್ವಂಸ !!

Maharatstra: ಕಳೆದ ವರ್ಷ ಮೋದಿ ಅನಾವರಣಗೊಳಿಸಿದ್ದ ಶಿವಾಜಿ ಪ್ರತಿಮೆ ಕುಸಿತ – ಒಂದು ವರ್ಷದೊಳಗೆ ಹೇಳ ಹೆಸರಿಲ್ಲದಂತೆ ದ್ವಂಸ !!

0 comments
Maharatstra

Maharastra: ಮಹಾರಾಷ್ಟ್ರದ ಸಿಂಧುದುರ್ಗದ ಕೋಟೆಯೊಂದರಲ್ಲಿ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ(PM Modi) ಅನಾವರಣಗೊಳಿಸಿದ್ದ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ(Shivaji Maharaj Statue) ಪ್ರತಿಮೆಯು ಉದ್ಘಾಟನೆ ಗೊಂಡು ಒಂದು ವರ್ಷ ಕಳೆಯುವ ಮುನ್ನವೇ ಸೋಮವಾರ ಕುಸಿದು ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೌದು, 2023ರ ಡಿಸೆಂಬರ್‌ 4ರಂದು ಭಾರತೀಯ ನೌಕಾಪಡೆಯ ದಿನಾಚರಣೆ ವೇಳೆ ಪ್ರಧಾನಿ ಮೋದಿ ಈ ಭವ್ಯ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಿದ್ದರು. ಆದರೆ ಮಾಲ್ವಾನ್‌ನ ರಾಜ್‌ಕೋಟ್ ಕೋಟೆಯಲ್ಲಿನ ಈ 35 ಅಡಿ ಉದ್ದದ ಮರಾಠ ರಾಜನ ಪ್ರತಿಮೆ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕುಸಿದಿದುಬಿದ್ದಿದೆ. ಪೊಲೀಸ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ತಜ್ಞರು ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ, ಬಿರುಗಾಳಿ ಬೀಸುತ್ತಿದೆ. ಇದರಿಂದಾಗಿ ಪ್ರತಿಮೆ ಧ್ವಂಸವಾಗಿದೆ ಎಂದು ಹೇಳಿದ್ದಾರೆ. ಸದ್ಯ ಪ್ರತಿಮೆ ಕುಸಿತಕ್ಕೆ ಮಳೆ ಗಾಳಿಯೇ ಕಾರಣವಾ? ಅಥವಾ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ ಕಾರಣವಾಯ್ತಾ ಅನ್ನೋ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮೌಲ್ಯಮಾಪನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಈ ಅವಘಡದ ಬೆನ್ನಲ್ಲೇ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಹಾರಾಷ್ಟ್ರ ಕಾಂಗ್ರೆಸ್, “ಬಿಜೆಪಿಯ ಭ್ರಷ್ಟ ಆಡಳಿತವು ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಮಹಾರಾಷ್ಟ್ರವನ್ನು ಅಗೌರವಿಸಿದೆ” ಎಂದು ಕಿಡಿಕಾರಿದೆ.

 

You may also like

Leave a Comment