6
Hubballi: ಮಹಾಶಿವರಾತ್ರಿ ಆಚರಣೆಗೆ ತೆರಳುವ ಭಕ್ತರು ಹಾಗೂ ಇತರ ಪ್ರಯಣಿಕರಿಗಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಗೋಕರ್ಣ ಹಾಗೂ ಮುರುಡೇಶ್ವರಕ್ಕೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.
ಫೆ.25 ರಂದು ಮಂಗಳವಾರ ರಾತ್ರಿ ಮತ್ತು 26 ರಂದು ಬುಧವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಗೋಕರ್ಣ ಹಾಗೂ ಮುರುಡೇಶ್ವರಕ್ಕೆ ನೇರ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಗೋಕುಲ ರಸ್ತೆ ನಿಲ್ದಾಣದಿಂದ ವಿಶೇಷ ಬಸ್ ಹೊರಡುತ್ತದೆ.
