DK Shivkumar : ಧರ್ಮಸ್ಥಳ ಕೇಸ್ ನಲ್ಲಿ ಭಾರೀ ಸದ್ದು ಮಾಡ್ತಿದ್ದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಮಹೇಶ್ ತಿಮರೋಡಿ, BJP ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ (BL Santhosh) ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಇದೇ ವಿಚಾರವಾಗಿ ಮಾತನಾಡಿದ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು, ಬಿಎಲ್ ಸಂತೋಷ್ ವಿರುದ್ಧ ಮಾತನಾಡಲು ಆತನ ಬಳಿ ಯಾವ ದಾಖಲೆ ಇದೆ. ವಿನಃ ಕಾರಣ ಅವಹೇಳನ ಮಾಡಿದ್ದ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೇವೆ ಎಂದು ಡಿಸಿಎಂ ಹೇಳಿದ್ದಾರೆ.
ರಾಜಕೀಯವಾಗಿ ಏನೇ ವಿರೋಧ ಇರಬಹುದು. ಆದರೆ ನಮ್ಮ ವಿರೋಧ ಪಕ್ಷದ ನಾಯಕರ ಬಗ್ಗೆ ಆಧಾರವಿಲ್ಲದೇ ಆರೋಪ ಮಾಡಿದ್ದಕ್ಕೆ ತಕ್ಕ ಕ್ರಮ ಕೈಗೊಂಡಿದ್ದೀವಿ. ಸಿಎಂ ಬಗ್ಗೆನೂ ಹೇಳಿಕೆ ನೀಡಿದ್ರು. ಅದೂ ಸರಿಯಲ್ಲ. ಏನೇ ವಿರೋಧಗಳಿರಲಿ, ಅದಕ್ಕೆ ದಾಖಲೆ ಇಟ್ಟುಕೊಂಡು ಮಾತನಾಡಬೇಕು. ಇಲ್ಲದೇ ಏನೇನೋ ಮಾತನಾಡೋದಲ್ಲ’ ಎಂದು ಡಿಕೆಶಿ ಖಡಕ್ ಆಗಿ ಹೇಳಿದ್ದಾರೆ.
Traffic Fine: ಟ್ರಾಫಿಕ್ ಫೈನ್ ಕಟ್ಟದ ವಾಹನ ಸವಾರರಿಗೆ ಗುಡ್ ನ್ಯೂಸ್ – 50% ರಿಯಾಯಿತಿ ಘೋಷಿಸಿದ ಸರ್ಕಾರ
