Karnataka Cabinet : ನವೆಂಬರ್ ನಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಯಿದ್ದು, ರಾಜ್ಯ ಕಾಂಗ್ರೆಸ್ ನಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಅಲ್ಲದೆ ಹಾಲಿ ಸಚಿವರು ಮತ್ತು ಸಚಿವ ಆಕಾಂಕ್ಷಿಗಳು ಭಾರಿ ಚಟುವಟಿಕೆಯಿಂದ ತೊಡಗಿದ್ದಾರೆ. ಕಾಂಗ್ರೆಸ್ ಪಾಳ್ಯದಲ್ಲಿ ಕೆಲಸ ಕಾರ್ಯಗಳು ಗರಿಗೆದರಿವೆ. ಹಾಗಾದ್ರೆ ಸಿದ್ದು ಸಂಪುಟ ಪುನರ್ ರಚನೆಯ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ ನೋಡಿ.
ಸಂಪುಟ ಪುನರ್‌ರಚನೆ ಹಿನ್ನೆಲೆಯಲ್ಲಿ ಹಲವಾರು ಹಾಲಿ ಸಚಿವರಿಗೆ ಸಚಿವ ಸ್ಥಾನದಿಂದ ವಿದಾಯ ನೀಡಿ, ಅವರನ್ನು ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಯುವ ಮುಖಂಡರು ಹಾಗೂ ಪಕ್ಷದ ನಿಷ್ಠಾವಂತ ನಾಯಕರು ಸಂಪುಟಕ್ಕೆ ಪ್ರವೇಶ ಪಡೆಯುವ ಸಾಧ್ಯತೆ ಇದೆ. ಬೆಳಗಾವಿ ಅಧಿವೇಶನದ ವೇಳೆಗೆ ಹೊಸ ಸಂಪುಟದೊಂದಿಗೆ ಸರ್ಕಾರ ಸಜ್ಜಾಗಲು ಸಿಎಂ ತಂತ್ರ ರೂಪಿಸಿದ್ದಾರೆ. ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಸಂಪುಟ ಪುನರ್‌ರಚನೆ ಖಚಿತವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತ ಅಂತಿಮ ನಿರ್ಧಾರ ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಹೊರ ಬೀಳುವ ನಿರೀಕ್ಷೆಯಿದೆ.
ಸಂಭಾವ್ಯ ಸಚಿವರ ಪಟ್ಟಿ
ಬಿ.ಕೆ. ಹರಿಪ್ರಸಾದ್
ಸಲೀಂ ಅಹಮದ್
ನಾಗೇಂದ್ರ
ಬಸವರಾಜ ರಾಯರೆಡ್ಡಿ
ಅಪ್ಪಾಜಿ ನಾಡಗೌಡ
ಲಕ್ಷ್ಮಣ ಸವದಿ
ರೂಪ ಶಶಿಧರ್
ಶ್ರೀನಿವಾಸ್ ಜಿ.ಎಚ್.
ಎಂ. ಕೃಷ್ಣಪ್ಪ
ಟಿ.ಬಿ. ಜಯಚಂದ್ರ
ರಿಜ್ವಾನ್ ಅರ್ಷದ್
ಯು.ಟಿ. ಖಾದರ್
ರಘುಮೂರ್ತಿ
ಶಿವಲಿಂಗೇಗೌಡ
ಎಚ್.ಸಿ. ಬಾಲಕೃಷ್ಣ
ಪಿ.ಎಂ. ನರೇಂದ್ರ ಸ್ವಾಮಿ
ಆನೇಕಲ್ ಶಿವಣ್ಣ
ಇದನ್ನೂ ಓದಿ:JCB ಡ್ರೈವರ್ ಆದ್ರೆ ಒಂದು ಗಂಟೆಗೆ ಎಷ್ಟು ಗಳಿಸಬಹುದು? ತಿಂಗಳಾಂತ್ಯಕ್ಕೆ ಎಷ್ಟು ಸಂಬಳ ಸಿಗುತ್ತೆ?
