2
Mangaluru: ಹೊಸ ಮನೆ ಕಟ್ಟಲು ವ್ಯವಹಾರಕ್ಕೆ ಹಣ ಹೂಡಿಕೆ ಮಾಡಿ ಬಹುಬೇಗ ಶ್ರೀಮಂತರಾಗಬಹುದು ಎಂದು ನಂಬಿಸಿ ದಂಪತಿಗೆ ಲಕ್ಷಾಂತರ ರೂ. ಮೋಸ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಲ್ಪೆಯ (mangaluru) ತೊಟ್ಟಂ ನಿವಾಸಿ ಕೆ.ಎ ಮಲ್ಲಿಕಾರ್ಜುನಯ್ಯ ಹಾಗೂ ಅವರ ಪತ್ನಿ ಸವಿತಾ ದಂಪತಿ ವಂಚನೆಗೊಳಗಾದವರು. ದಾವಣಗೆರೆ ಮೂಲದ ದಂಪತಿ ಇವರಾಗಿದ್ದು ಸದಾಕಾತುಲ್ಲ, ಹವ್ವಾ ಇಲಿಯಾಸ್, ಸುನೈನಾ ಬಂಧಿತ ಆರೋಪಿಗಳು. ಇವರು ಮಲ್ಪೆಯಲ್ಲಿ ವಾಸವಾಗಿದ್ದರು. ಕ್ರಮೇಣ ಇವರಿಗೆ ಮುಸ್ಲಿಂ ಕುಟುಂಬದ ಸ್ನೇಹವಾಗಿತ್ತು.
ಇದನ್ನೇ ಬಂಡವಾಳ ಮಾಡಿಕೊಂಡು ಬೇಗ ಶ್ರೀಮಂತರಾಗಬಹುದು ಎಂದು ನಂಬಿಸಿ ಸುಮಾರು ಹದಿನೈದು ಲಕ್ಷಕ್ಕೂ ಅಧಿಕ ಹಣ ವಂಚಿಸಿದ್ದಾರೆ. ಮುಖಾಮುಖಿ ಭೇಟಿ ಆದಾಗ ಅದನ್ನು ಕೇಳಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
