Home » Mangaluru: ಮಲ್ಪೆ: ಮೆಹಂದಿ ಕಾರ್ಯಕ್ರಮದಲ್ಲಿ ತಡರಾತ್ರಿ ವರೆಗೆ ಡಿ.ಜೆ ಬಳಕೆ: ಎಫ್ ಐ ಆರ್ ದಾಖಲು!

Mangaluru: ಮಲ್ಪೆ: ಮೆಹಂದಿ ಕಾರ್ಯಕ್ರಮದಲ್ಲಿ ತಡರಾತ್ರಿ ವರೆಗೆ ಡಿ.ಜೆ ಬಳಕೆ: ಎಫ್ ಐ ಆರ್ ದಾಖಲು!

0 comments

Mangaluru : ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಕಲ್ಮಾಡಿ ಎಂಬಲ್ಲಿ ನಿಯಮ ಉಲ್ಲಂಘಿಸಿ ತಡರಾತ್ರಿಯವರೆಗೆ ಡಿ.ಜೆ ಸೌಂಡ್‌ ಬಳಸಿದವರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡವೂರಿನ ಜಯ ಎಂಬವರ ಮನೆಯಲ್ಲಿ ಅವರ ಮಗ ರಂಜಿತ್‌ ಎಂಬವರ ಮೆಹಂದಿ ಕಾರ್ಯಕ್ರಮ ನಡೆಯುತ್ತಿತ್ತು. ಧ್ವನಿವರ್ಧಕ ಬಳಸಲು ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿ, ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟುಮಾಡಿದ ರಂಜಿತ್‌ ಹಾಗೂ ಸುಶಾನ್‌ ಸೌಂಡ್‌ ಸಿಸ್ಟಮ್‌ ವಿರುದ್ಧ ಮಲ್ಪೆ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

You may also like