Home » ಮಲ್ಪೆ : ಬೈಕ್ ಮತ್ತು ಬಸ್ ಆಕ್ಸಿಡೆಂಟ್- ಕೂದಲೆಳೆಯ ಅಂತರದಲ್ಲಿ ಪಾರಾದ ಆಪತ್ಭಾಂಧವ ಈಶ್ವರ್ ಮಲ್ಪೆ!

ಮಲ್ಪೆ : ಬೈಕ್ ಮತ್ತು ಬಸ್ ಆಕ್ಸಿಡೆಂಟ್- ಕೂದಲೆಳೆಯ ಅಂತರದಲ್ಲಿ ಪಾರಾದ ಆಪತ್ಭಾಂಧವ ಈಶ್ವರ್ ಮಲ್ಪೆ!

0 comments

ಮಲ್ಪೆ: ಆಪತ್ಭಾಂಧವ ಈಶ್ವರ್ ಜಿಲ್ಲೆಯ ಯಾರಲ್ಲಿಯೂ ಕೇಳಿದರೂ ಚಿರಪರಿಚಿತ. ಯಾವುದೇ ಭಾಗದ ಕಡಲು ಅಥವಾ ನದಿಯಲ್ಲಿ ದುರಂತ ಸಂಭವಿಸಿದರೂ ಕ್ಷಣ ಮಾತ್ರದಲ್ಲಿ ನೆರವಿಗೆ ಧಾವಿಸುವ ಈಶ್ವರ್ ಮಲ್ಪೆ, ಇವತ್ತು ಸಾವಿನ ಜೊತೆ ಹೋರಾಡಿ ಗೆದ್ದು ಬಂದಿದ್ದಾರೆ.

ಮಲ್ಪೆಯ ವಡಬಾಂಡೇಶ್ವರದಲ್ಲಿ ಇವರ ಬೈಕ್ ಮತ್ತು ಬಸ್ಸೊಂದು ಮುಖಾಮುಖಿ ಡಿಕ್ಕಿ ಹೊಡೆದರೂ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಈ ಅಪಘಾತದ ವೀಡಿಯೋ ವೈರಲ್ ಆಗಿದೆ. ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಈಶ್ವರ್ ಪಾರಾಗಿದ್ದು ಸದ್ಯ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಮಲ್ಪೆ ಭಾಗದ ಜನರಿಗೆ ಈ ವಿಷಯ ತಿಳಿದು, ಈಶ್ವರ್ ಮಲ್ಪೆ ಅವರ ಆರೋಗ್ಯ ವಿಚಾರಿಸಲು ಮನೆಗೆ ಧಾವಿಸುತ್ತಿದ್ದಾರೆ. ಅಲ್ಲಿಯ ಜನ ಅವರು ಜನರಿಗೆ
ಮಾಡಿದ ಪರೋಪಕಾರವೇ ಅವರ ಜೀವ ಉಳಿಸಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

You may also like

Leave a Comment