Home » Malpe: ಸೈಂಟ್‌ಮೆರೀಸ್‌ಗೆ ದ್ವೀಪ ಪ್ರವೇಶಕ್ಕೆ 4 ತಿಂಗಳ ಕಾಲ ನಿರ್ಬಂಧ

Malpe: ಸೈಂಟ್‌ಮೆರೀಸ್‌ಗೆ ದ್ವೀಪ ಪ್ರವೇಶಕ್ಕೆ 4 ತಿಂಗಳ ಕಾಲ ನಿರ್ಬಂಧ

0 comments
Malpe Beach

Malpe: ಮಲ್ಪೆ ಸೈಂಟ್‌ಮೆರೀಸ್‌ ದ್ವೀಪ ಪ್ರವೇಶಕ್ಕೆ ನಾಲ್ಕು ತಿಂಗಳ ಕಾಲ ನಿರ್ಬಂಧ ಹೇರಲಾಗಿದೆ. ಜೊತೆಗೆ ಎಲ್ಲಾ ಜಲಸಾಹಸ ಕ್ರೀಡೆಗಳನ್ನು ಅಲ್ಲಿಯವರೆಗೆ ನಿಲ್ಲಿಸಲಾಗಿದೆ.

ಮಳೆಗಾಲದಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುತ್ತದೆ. ಇದು ದ್ವೀಪಕ್ಕೆ ಹೋಗುವವರ ಅಪಾಯಕಾರಿ ಎಂಬ ಕಾರಣಕ್ಕೆ ಪ್ರತಿ ವರ್ಷ ಮೇ 15 ರಿಂದ ಸೆ 15 ರ ವರೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸುತ್ತದೆ. ಮಳೆಗಾಲದಲ್ಲಿ ಪಶ್ಚಿಮ ಕರಾವಳಿಯಲ್ಲಿ ಬೋಟ್‌ ಚಲಾಯಿಸಲು ಅನುಮತಿ ಇರದು. ಹಾರ್ಬರ್‌ ಕ್ರಾಫ್ಟ್‌ ನಿಯಮಗಳ ಅನ್ವಯ ಇದನ್ನು ಸ್ಥಗಿತ ಮಾಡಲಾಗಿದೆ.

ನಿಯಮಗಳ ಅನುಸಾರ ಮೇ 16 ರಿಂದ 4 ತಿಂಗಳು ನಿಷೇಧವಿದೆ. ಸಮುದ್ರದ ವಾತಾವರಣ ಅನುಕೂಲ ಆಧರಿಸಿ ಜೂನ್‌ 1 ರವರೆಗೆ ನೀರಿಗಿಳಿಯಬಹುದು. ನಂತರ ಬೀಚ್‌ನ ಉದ್ದಕ್ಕೂ ತಡೆಬೇಲಿ ಹಾಕಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಸ.ನಿರ್ದೇಶಕ ಚಂದ್ರಶೇಖರ್‌ ಹೇಳಿದ್ದಾರೆ.

You may also like