Home » Odisha : ಕುಡಿದ ಅಮಲಿನಲ್ಲಿ ಮಿತಿ ಮೀರಿದ ಜಗಳ, ಗುಪ್ತಾಂಗವನ್ನೇ ಕತ್ತರಿಸಿದ ಸ್ನೇಹಿತ !

Odisha : ಕುಡಿದ ಅಮಲಿನಲ್ಲಿ ಮಿತಿ ಮೀರಿದ ಜಗಳ, ಗುಪ್ತಾಂಗವನ್ನೇ ಕತ್ತರಿಸಿದ ಸ್ನೇಹಿತ !

1 comment
Drunken

Drunken : ವ್ಯಕ್ತಿಯೊಬ್ಬ ಕುಡಿದ (drunken) ಅಮಲಿನಲ್ಲಿ ಜಗಳವಾಡಿ ತನ್ನ ಸ್ನೇಹಿತನ (Friend) ಗುಪ್ತಾಂಗವನ್ನು ಕತ್ತರಿಸಿದ ಘಟನೆ ನಡೆದಿದೆ.

ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಲ್ಲಿ ಭಗಬತ್ ದಾಸ್ (30) ಮತ್ತು ಆತನ ಸ್ನೇಹಿತ ಅಕ್ಷಯ್ ರೌತ್ (32) ಪೆಂಥಾ ಬೀಚ್‍ನಲ್ಲಿ ಕಂಠಮಟ್ಟ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಅವರಿಬ್ಬರ ನಡುವೆ ವಾಗ್ಯುದ್ಧ ನಡೆದಿದೆ. ಕೋಪಗೊಂಡ ಅಕ್ಷಯ್ ಅಲ್ಲೇ ಇದ್ದ ಹರಿತವಾದ ಆಯುಧದಿಂದ ಭಗಬತ್ ದಾಸ್‍ನ ಗುಪ್ತಾಂಗವನ್ನು ಕತ್ತರಿಸಿ ಹಾಕಿದ್ದಾನೆ. ಅದಾದ ಬಳಿಕ ಅಕ್ಷಯ್ ಸ್ಥಳದಿಂದ ಓಡಿಹೋಗಿದ್ದಾನೆ.

ಈ ಇಬ್ಬರು ಸ್ನೇಹಿತರು ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದು ಬೀಚ್‍ಗೆ ಹೋಗಿದ್ದರು. ಇದೀಗ ಪರಾರಿಯಾಗಿರುವ ಅಕ್ಷಯ್‍ಗಾಗಿ ಹುಡುಕಾಟ ನಡೆಸುತ್ತಿರುವಾಗ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಭಗಬತ್‍ನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಘಟನೆಗೆ ಕುರಿತು ಪ್ರಕರಣ ದಾಖಲಾಗಿದೆ.

You may also like

Leave a Comment