Home » Noida: ಗೂಗಲ್‌ ಮ್ಯಾಪ್‌ ತೋರಿಸಿದ ಹಾದಿ ನಂಬಿ, 30 ಅಡಿ ಆಳದ ಚರಂಡಿಗೆ ಬಿದ್ದ ಯುವಕ ಸಾವು!

Noida: ಗೂಗಲ್‌ ಮ್ಯಾಪ್‌ ತೋರಿಸಿದ ಹಾದಿ ನಂಬಿ, 30 ಅಡಿ ಆಳದ ಚರಂಡಿಗೆ ಬಿದ್ದ ಯುವಕ ಸಾವು!

0 comments

Noida: ಮದುವೆಯಲ್ಲಿ ಪಾಲ್ಗೊಳ್ಳಲು ಗೂಗಲ್‌ ಮ್ಯಾಪ್‌ ನಂಬಿ ಹೋದ ಯುವಕನೋರ್ವ 30 ಅಡಿ ಆಳದ ಚರಂಡಿ(Drain) ಗೆ ಬಿದ್ದ ಪರಿಣಾಮ ಪ್ರಾಣ ಕಳೆದುಕೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ತಪ್ಪು ದಾರಿಯನ್ನು ಮ್ಯಾಪ್‌ ತೋರಿಸಿರಬಹುದು ಎಂದು ಸ್ಥಳೀಯರು ಊಹೆ ಮಾಡುತ್ತಿದ್ದಾರೆ. ಪೊಲೀಸರು ಇದನ್ನು ಇನ್ನೂ ದೃಢೀಕರಣ ಮಾಡಿಲ್ಲ.

ಭರತ್‌ ಸಿಂಗ್‌ (31) ಮೃತ ವ್ಯಕ್ತಿ. ದೆಹಲಿಯ ಮಂದವಾಲಿ ನಿವಾಸಿಯಾಗಿದ್ದು, ಸ್ಟೇಷನ್‌ ಮಾಸ್ಟರ್‌ ಆಗಿ ಕೆಲಸ ಮಾಡುತ್ತಿದ್ದರು. ಮಾರ್ಚ್‌ 1 ರಂದು ಗ್ರೇಟರ್‌ ನೋಯ್ಡಾದ ಸೆಕ್ಟರ್‌ ಪಿ 4 ನಲ್ಲಿ ಶನಿವಾರ ಈ ದುರ್ಘಟನೆ ನಡೆದಿರುವ ಕುರಿತು ಪೊಲೀಸರು ತಿಳಿಸಿದ್ದಾರೆ.

You may also like