Home » Bangalore: ಕಾರಿನಲ್ಲೇ ಹೃದಯಾಘಾತದಿಂದ ಯುವಕ ಸಾವು

Bangalore: ಕಾರಿನಲ್ಲೇ ಹೃದಯಾಘಾತದಿಂದ ಯುವಕ ಸಾವು

0 comments

Bangalore: ಪಾರ್ಕ್‌ ಮಾಡಿದ್ದ ಕಾರಿನಲ್ಲಿ ಯುವಕನೋರ್ವ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಬ್ರೂಕ್‌ ಫೀಲ್ಡ್‌ ರಸ್ತೆಯಲ್ಲಿ ನಡೆದಿದೆ. ಫೆ.20 ರಂದು ಈ ಅವಘಡ ನಡೆದಿದ್ದು, ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಗ್ರ್ಯಾಂಡ್‌ ಐಟಿನ್‌ ಕಾರಿನಲ್ಲಿ ಮೃತಪಟ್ಟ ಯುವಕ, ಮೃತದೇಹವನ್ನು ನೋಡಿದ ಅಪರಿಚಿತ ವ್ಯಕ್ತಿ ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಕೂಡಲೇ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ವೈಟ್‌ ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like