Home » Mangaluru : ಡೆತ್‌ನೋಟ್ ಬರೆದಿಟ್ಟು ವ್ಯಕ್ತಿ ನಾಪತ್ತೆ- ಪತ್ರದಲ್ಲಿ ಏನಿದೆ ಗೊತ್ತೇ?

Mangaluru : ಡೆತ್‌ನೋಟ್ ಬರೆದಿಟ್ಟು ವ್ಯಕ್ತಿ ನಾಪತ್ತೆ- ಪತ್ರದಲ್ಲಿ ಏನಿದೆ ಗೊತ್ತೇ?

271 comments

Mangaluru : ಮಂಗಳೂರು ನಗರದ ಹಂಪನಕಟ್ಟೆಯಲ್ಲಿ ಮಹಾದೇವ ಸ್ವಾಮಿ ಎಂಬವರು ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಹೌದು, ಮಂಗಳೂರು(Mangaluru) ನಗರದ ಹಂಪನಕಟ್ಟೆಯ(Hampanakatte) ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗುಂಡ್ಲು ಪೇಟೆಯ ನಿವಾಸಿ ಮಹಾದೇವ ಸ್ವಾಮಿ ಎಂಬವರು ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊರೆತ ಮಾಹಿತಿ ಪ್ರಕಾರ ಬೇಕರಿಯಲ್ಲಿ ಮ್ಯಾನೇಜರ್ ಆಗಿ ರೋಹಿತ್ ಪೂಜಾರಿ ಕೆಲಸ ಮಾಡುತ್ತಿದ್ದರು. ಅವರು ಕೆಲಸದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿದ್ದು, ಈ ವೇಳೆ ಬೇಕರಿಯ ಹಣದ ವಹಿವಾಟವನ್ನು ಮಹಾದೇವ ಸ್ವಾಮಿ ನೋಡಿಕೊಳ್ಳುತ್ತಿದ್ದರು. ಆದರೆ ನ.26ರಂದು ದಿನದ ವ್ಯವಹಾ ರದ ಹಣವನ್ನು ಮಹಾದೇವ ಸ್ವಾಮಿ ಬ್ಯಾಂಕ್‌ಗೆ ಜಮೆ ಮಾಡಿಲ್ಲ. ರಾತ್ರಿ ರೂಮಿಗೆ ತೆರಳಿದ್ದ ಆತ ಮರುದಿನ ಬೆಳಗ್ಗೆ ಸವಹರ್ತಿಗಳು ನೋಡಿದಾಗ ರೂಮಿನಿಂದ ನಾಪತ್ತೆಯಾಗಿದ್ದಾರೆ. ಅಲ್ಲದೆ ಮೊಬೈಲ್ ಕೂಡಾ ಬಿಟ್ಟು ಹೋಗಿದ್ದು, ಡೆತ್ ನೋಟ್ ಕೂಡ ಬರೆದಿತ್ತಿದ್ದಾನೆ ಎನ್ನಲಾಗಿದೆ.

ಡೆತ್ ನೋಟ್ ಅಲ್ಲಿ ಏನಿದೆ?
ನನ್ನನ್ನು ಹುಡುಕಬೇಡಿ, ನಾನು ಸಿಗುವುದಿಲ್ಲ, ಪ್ಲೀಸ್ ನನ್ನನ್ನು ಕ್ಷಮಿಸಿ, ಬದುಕಲು ಅರ್ಹನಲ್ಲ, ಸಾರಿ… ನನ್ನ ಸಾವಿಗೆ ನಾನೇ ಕಾರಣ’ ಎಂದು ಡೆತ್‌ನೋಟ್ ಬರೆದಿಟ್ಟು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

You may also like

Leave a Comment