Home » SHOCKING NEWS: ‘ಕಾಂಡೊಮ್ ‘ ನಲ್ಲಿ ಬಾಳೆಹಣ್ಣು ಹಾಕಿ ನುಂಗಿದ ವ್ಯಕ್ತಿ: ಮತ್ತೇನಾಯ್ತು ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!!

SHOCKING NEWS: ‘ಕಾಂಡೊಮ್ ‘ ನಲ್ಲಿ ಬಾಳೆಹಣ್ಣು ಹಾಕಿ ನುಂಗಿದ ವ್ಯಕ್ತಿ: ಮತ್ತೇನಾಯ್ತು ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!!

0 comments

ಇದೊಂದು ಆಶ್ಚರ್ಯ ಮೂಡಿಸುವ ಘಟನೆ ಆಗಿದ್ದು ಒಂದು ಸಾರಿ ಎದೆ ಜುಮ್ ಎನ್ನುತ್ತೆ. ಹೌದು ಕಾಂಡೋಮ್ ನೋಡೋಕೆ, ಮುಟ್ಟೋಕೆ ಸ್ಮೂತ್ ಗಿದ್ದರೂ ಸಹ ಬಹಳ ಡೇಂಜರ್ ಆಗಿದೆ. ಹೌದು ಇಲ್ಲೊಬ್ಬ ಮಾನಸಿಕ ವ್ಯಕ್ತಿಯೊಬ್ಬ ಬಾಳೆಹಣ್ಣೊಂದನ್ನು ಕಾಂಡೋಮ್‌ ಒಳಗೆ ಹಾಕಿ ನುಂಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

34 ವರ್ಷದ ಈ ವ್ಯಕ್ತಿ ಬಾಳೆಹಣ್ಣನ್ನು ಕಾಂಡೋಮ್ ಒಳಗೆ ಹಾಕಿ ಸೇವಿಸಿದ ನಂತರ ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ ತೊಂದರೆಯಿಂದ ಹೊರಲಾಡುತ್ತಿದ್ದ.

ಆದರೆ ಬಾಳೆಹಣ್ಣು ಕರುಳಿನ ಮಧ್ಯೆ ಸಿಲುಕಿದ್ದರಿಂದ ಆತನಿಗೆ ಆಹಾರ ಮತ್ತು ಪಾನೀಯವನ್ನೂ ಸಹ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಸ್ಥಳೀಯರೊಬ್ಬರ ಸಹಾಯದಿಂದ ಆಸ್ಪತ್ರೆಯೊಂದಕ್ಕೆ ಹೋಗಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ.

ಸದ್ಯ ವೈದ್ಯರು ಆತನ ಹೊಟ್ಟೆ ಸ್ಕ್ಯಾನ್ ಮಾಡಿ ನೋಡಿದಾಗ ಆ ವ್ಯಕ್ತಿಯ ಸಣ್ಣ ಕರುಳಿನಲ್ಲಿ ಕಾಂಡೋಮ್ ಸುತ್ತಿದ ಬಾಳೆಹಣ್ಣು ಅಡ್ಡಿಯಾಗಿರುವುದು ಕಂಡುಬಂದಿರುತ್ತದೆ.
ವೈದ್ಯರೂ ಸಹ ಈ ಸ್ಕ್ಯಾನ್ ನೋಡಿ ಆಘಾತಕ್ಕೊಳಗಾಗಿದ್ದು ನಂತರ ಚಿಕಿತ್ಸೆ ಮೂಲಕ ಕಾಂಡೋಮ್ ಸಹಿತ ಬಾಳೆಹಣ್ಣನ್ನು ಯಶಸ್ವಿಯಾಗಿ ಹೊರ ತೆಗೆಯಲಾಯಿತು. ಸದ್ಯ ಕ್ಯೂರಿಯಸ್ ಜರ್ನಲ್ ಆಫ್ ಮೆಡಿಕಲ್ ಸೈನ್ಸ್ ಪ್ರಕರಣದ ಅಧ್ಯಯನವನ್ನು ದಾಖಲಿಸಿದ್ದು ಮತ್ತು ಅದರ ದಾಖಲೆಗಳಲ್ಲಿ ಅದರ ವಿವರಗಳನ್ನು ಪಟ್ಟಿ ಮಾಡಿರುವ ವಿಚಾರವನ್ನು ವೈದ್ಯರು ತಿಳಿಸಿದ್ದಾರೆ.

ಇದೀಗ ಮಾನಸಿಕ ವ್ಯಕ್ತಿ ಆರೋಗ್ಯವಾಗಿದ್ದು ಮೂರು ದಿನಗಳ ನಂತರ ವ್ಯಕ್ತಿಯನ್ನು ಆಸ್ಪತ್ರೆಯಿಂದ ಕಳುಹಿಸಿ ಕೊಡಲಾಗಿದೆ.

You may also like

Leave a Comment