ಇಂದೋರ್: ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮತ್ತು ಕೊಲೆಗೆ ಯತ್ನ ಮಾಡಿದ ಆರೋಪದಲ್ಲಿ 38 ವರ್ಷದ ವ್ಯಕ್ತಿಗೆ ಇಂದೋರ್‌ನ ವಿಶೇಷ ನ್ಯಾಯಾಲಯವು ಶುಕ್ರವಾರ ನಾಲ್ಕು ಬಾರಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮತ್ತು ವಿಶೇಷ ನ್ಯಾಯಾಧೀಶ ಕ್ಷಿಪ್ರಾ ಪಟೇಲ್ ಆರೋಪಿ ದಿನೇಶ್‌ಗೆ ಪೋಕ್ಸೋ ಕಾಯ್ದೆಯ ಸೆಕ್ಷನ್ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಪ್ರತ್ಯೇಕವಾಗಿ ನಾಲ್ಕು ಬಾರಿ ಜೀವಾವಧಿ ಶಿಕ್ಷೆ ವಿಧಿಸಿದರು. ಅಲ್ಲದೇ ಆರೋಪಿಗೆ 366 ಸೆಕ್ಷನ್ ರ ಅಡಿಯಲ್ಲಿ ಆರೋಪಿಗೆ ಐದು ವರ್ಷಗಳ ಕಠಿಣ ಶಿಕ್ಷೆ ಮತ್ತು 42000 ರೂ. ದಂಡ ವಿಧಿಸಿದೆ.
ಈ ಘಟನೆ ಅಕ್ಟೋಬರ್ 13, 2022 ರ ಮುಂಜಾನೆ ನಡೆದಿದ್ದು, ಇಂದೋರ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದ ಕಾವಲುಗಾರನಾಗಿದ್ದ ತಂದೆ, ತನ್ನ ಎರಡು ವರ್ಷದ ಮಗಳು ಮಲಗಿದ್ದ ಸ್ಥಳದಿಂದ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದು,ಹುಡುಕಾಟ ಮಾಡಿದಾಗ ತೀವ್ರವಾಗಿ ಗಾಯಗೊಂಡ ಮಗುವನ್ನು ನಂತರ ರೇತಿ ಮಂಡಿ ರಸ್ತೆಯ ಬಳಿಯ ಪೊದೆಗಳಲ್ಲಿ ಪತ್ತೆ ಮಾಡಲಾಯಿತು.
ತನಿಖೆಯ ಸಮಯದಲ್ಲಿ, ಆರೋಪಿಗೆ ಸೇರಿದ ಟ್ರಕ್ ಮಗುವಿನ ನಿವಾಸದ ಸ್ಥಳಕ್ಕೆ ಮತ್ತು ಅಲ್ಲಿಂದ ಚಾಲನೆ ಮಾಡುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡರು. ಡಿಎನ್‌ಎ ಪುರಾವೆಗಳು ನಂತರ ದಿನೇಶ್ ಭಾಗಿಯಾಗಿರುವುದನ್ನು ದೃಢಪಡಿಸಿದವು.
ಈ ಪ್ರಕರಣವು “ಗಂಭೀರ ಮತ್ತು ಸಂವೇದನಾಶೀಲ ಅಪರಾಧ” ವರ್ಗಕ್ಕೆ ಸೇರಿದೆ ಎಂದು ನ್ಯಾಯಾಲಯವು ಗಮನಿಸಿದೆ. ಪ್ರಾಸಿಕ್ಯೂಷನ್ ತಂಡ – ವಿಶೇಷ ಸಾರ್ವಜನಿಕ ಅಭಿಯೋಜಕರಾದ ಸುಶೀಲಾ ರಾಥೋಡ್ ಮತ್ತು ಪ್ರೀತಿ ಅಗರವಾಲ್ – 31 ಸಾಕ್ಷಿಗಳನ್ನು ವಿಚಾರಣೆ ನಡೆಸಿ, ಶಿಕ್ಷೆ ವಿಧಿಸಿದರು. ನ್ಯಾಯಾಲಯವು ಬಲಿಪಶು ಪರಿಹಾರ ಯೋಜನೆಯಡಿ ಬದುಕುಳಿದವರಿಗೆ ₹3 ಲಕ್ಷ ಪರಿಹಾರವನ್ನು ಶಿಫಾರಸು ಮಾಡಿತು.
