Home » Mangalore: ತಾನು ಕಲಿತ ಶಾಲೆಯಲ್ಲಿಯೇ ನೇಣಿಗೆ ಶರಣಾದ ವ್ಯಕ್ತಿ: ಕಿಡ್ನಿ ದಾನ ಮಾಡುವಂತೆ ಡೆತ್‌ನೋಟಲ್ಲಿ ಉಲ್ಲೇಖ

Mangalore: ತಾನು ಕಲಿತ ಶಾಲೆಯಲ್ಲಿಯೇ ನೇಣಿಗೆ ಶರಣಾದ ವ್ಯಕ್ತಿ: ಕಿಡ್ನಿ ದಾನ ಮಾಡುವಂತೆ ಡೆತ್‌ನೋಟಲ್ಲಿ ಉಲ್ಲೇಖ

0 comments

Ullala: ಯುವಕನೋರ್ವ ತಾನು ಕಲಿತ ಶಾಲೆಯ ಆವರಣದಲ್ಲಿ ನೇಣುಹಾಕಿಕೊಂಡು ಮೃತಪಟ್ಟ ಘಟನೆ ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕುರ್ನಾಡು ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ನಡೆದಿದೆ.

ಕುರ್ನಾಡು ಹೂವಿನಕೊಪ್ಪಲ ನಿವಾಸಿ ಸುಧೀರ್‌ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಪೇಂಟರ್‌ ಕೆಲಸ ಮಾಡಿಕೊಂಡಿದ್ದ ಸುಧೀರ್‌, ನಸುಕಿನ ಸಮಯದಲ್ಲಿ ಬೈಕ್‌ನಲ್ಲಿ ಹಾಲು ತರಲೆಂದು ಮನೆಯಿಂದ ಹೊರಗೆ ಹೋಗಿದ್ದು, ತಡವಾದರೂ ಮಗ ಬಾರದ ಕಾರಣ ತಾಯಿ ಸುಧೀರ್‌ ನನ್ನು ಹುಡುಕಿಕೊಂಡು ಹೋದಾಗ ಮನೆ ಸಮೀಪದ ಶಾಲೆಯ ಹೊರಗಡೆ ಬೈಕ್‌ ಕೀ ಸಮೇತ ಪತ್ತೆಯಾಗಿತ್ತು. ಶಾಲೆಯೊಳಗೆ ಗಮನಿಸುವಾಗ ಸುಧೀರ್‌ ಶಾಲೆಯ ಮಹಡಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿರುವುದು ಕಂಡು ಬಂದಿದೆ.

ಅವಿವಾಹಿತರಾಗಿದ್ದ ಸುಧೀರ್‌ ತನ್ನ ಸಹೋದರಿಯ ಪತಿಗೆ ತನ್ನ ಕಿಡ್ನಿ ದಾನ ಮಾಡುವಂತೆ ಹಾಗೂ ಮೇ 29 ರಂದು ನಿಗದಿಯಾಗಿರುವ ತನ್ನ ಸಹೋದರನ ವಿವಾಹವನ್ನು ನಿಲ್ಲಿಸದಂತೆ ಡೆತ್‌ನೋಟಲ್ಲಿ ಉಲ್ಲೇಖ ಮಾಡಿದ್ದಾರೆ.

ಕೊಣಾಜೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ದತ್ತಾತ್ರೇಯ ಭಜನಾ ಹಾಗೂ ಯಕ್ಷಗಾನ ಸಂಘದ ಸದ್ಯರಾಗಿದ್ದರು ಸುಧೀರ್.‌

You may also like