Home » ನಡು ರಸ್ತೆಯಲ್ಲಿ ಜಗಳ ಕಾದ ದಂಪತಿ | ಈ ಮಧ್ಯೆ ಏಕಾಏಕಿ ಪತ್ನಿಯನ್ನು ಲಾರಿ ಕೆಳಗೆ ತಳ್ಳಿದ ಗಂಡ, ಭೀಕರ ಘಟನೆಗೆ ಬೆಚ್ಚಿಬಿದ್ದ ಜನ !

ನಡು ರಸ್ತೆಯಲ್ಲಿ ಜಗಳ ಕಾದ ದಂಪತಿ | ಈ ಮಧ್ಯೆ ಏಕಾಏಕಿ ಪತ್ನಿಯನ್ನು ಲಾರಿ ಕೆಳಗೆ ತಳ್ಳಿದ ಗಂಡ, ಭೀಕರ ಘಟನೆಗೆ ಬೆಚ್ಚಿಬಿದ್ದ ಜನ !

0 comments

ದಂಪತಿಗಳ ನಡು ಬೀದಿಯ ರಾದ್ದಾಂತ ಮತ್ತು ಜಗಳ ವಿಕೋಪಕ್ಕೆ ತಿರುಗಿ ಗಂಡ ತನ್ನ ಪತ್ನಿಯನ್ನೇ ಲಾರಿ ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮೂಲದ 40 ವರ್ಷದ ಸುಮೈರಾ ಸುಲ್ತಾನ್ ಹಾಗೂ ಮುನಿಕೃಷ್ಣ ಇಬ್ಬರು ತಮ್ಮಹಿಂದಿನ ಸಂಸಾರವನ್ನು ಬಿಟ್ಟು ಮತ್ತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ದಂಪತಿಗೆ 4 ವರ್ಷದ ಬಾಬಾಜಾನ್ ಎನ್ನುವ ಮಗು ಕೂಡಾ ಹುಟ್ಟಿತ್ತು. ಈ ದಂಪತಿಯ ಪದ್ಯ ಆಗಾಗ ಸಾಂಸಾರಿಕ ಕಲಹ ನಡೆಯುತ್ತಿತ್ತು.

ಇಂದು ಕೂಡಾ ಚಿಕ್ಕಬಳ್ಳಾಪುರ ನಗರದ ಗ್ರಂಥಾಲಯದ ಮುಂದೆ ದಂಪತಿಗಳ ಮಧ್ಯ ಜಗಳ ಹತ್ತಿಕೊಂಡಿತ್ತು. ಅವರಿಬ್ಬರೂ ಅಲ್ಲಿಯೇ ನಡು ರಸ್ತೆಯಲ್ಲಿ ಜಗಳ ಕಾದಿದ್ದರು. ಆಗ ರಸ್ತೆಯಲ್ಲಿ ಲಾರಿಯೊಂದು ಬರುತ್ತಿರುವುದನ್ನು ಗಮನಿಸಿದ ಮುನಿಕೃಷ್ಣ ತನ್ನ ಪತ್ನಿ ಸುಮೈರಾ ಸುಲ್ತಾನ್‌ಳನ್ನು ಏಕಾಏಕಿ ಲಾರಿ ಕೆಳಗೆ ದೂಡಿದ್ದಾನೆ. ಸುಮೈರಾ ಸುಲ್ತಾನ್‌ ಲಾರಿ ಟೈರಿನ ಕೆಳಕ್ಕೆ ಬಿದ್ದು ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾಳೆ. ಅವರವರ ಜಗಳವನ್ನು ನೋಡುತ್ತಿದ್ದ ಮಂದಿಯ ಕಣ್ಣಾರೆ ಸುಮೈರಾ ಸುಲ್ತಾನ್‌ಳ ಧಾರುಣ ಸಾವು ಸಂಭವಿಸಿದೆ.

ಸುದ್ದಿ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು ಆರೋಪಿ ಮುನಿಕೃಷ್ಣನನ್ನು ಬಂಧಿಸಿದ್ದಾರೆ. ಮುನಿಕೃಷ್ಣ ಮತ್ತು ಸುಮೈರಾ 8 ವರ್ಷಗಳ ಹಿಂದೆ ತಮ್ಮ ತಮ್ಮ ಸಂಸಾರ ಬಿಟ್ಟು ಚಿಂತಾಮಣಿ ನಗರದದಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿದ್ದಾರೆ.

You may also like

Leave a Comment