Home » Viral Video : ಖ್ಯಾತ ಮಾಡೆಲ್ ಎದುರು ನಿಂತು ನಡು ರಸ್ತೆಯಲ್ಲಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ!!

Viral Video : ಖ್ಯಾತ ಮಾಡೆಲ್ ಎದುರು ನಿಂತು ನಡು ರಸ್ತೆಯಲ್ಲಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ!!

0 comments

Viral Video : ಸಾರ್ವಜನಿಕ ಪ್ರದೇಶದಲ್ಲಿ ಕಾಮುಕರ ಹಾವಳಿ ಹೆಚ್ಚುಗುತ್ತಿದೆ. ಹುಡುಗಿಯರನ್ನು ನೋಡಿದ ತಕ್ಷಣ ಕೆಟ್ಟಾಗಿ ನಡೆದುಕೊಳ್ಳುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದೀಗ ಮಾಡೆಲ್ ಒಬ್ಬರು ವಿಡಿಯೋವೊಂದು ಹಂಚಿಕೊಂಡು, ತನಗೆ ಆಗಿರುವ ಈ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಹೌದು, ಜೈಪುರದ (Jaipur) ಗುರ್ಗಾಂವ್ನಲ್ಲಿ (Gurgaon police) ಈ ಘಟನೆ ನಡೆದಿದೆ. ರಸ್ತೆಯಲ್ಲಿ ಅಷ್ಟೊಂದು ಜನದಟ್ಟಣೆ ಇದ್ರು ಆತನ ನನ್ನ ನೋಡಿ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಈ ಕುರಿತಾಗಿ ವಿಡಿಯೋ ಮಾಡಿ ಅವರು ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ದೆಹಲಿ-ಜೈಪುರ ಹೆದ್ದಾರಿಯ ರಾಜೀವ್ ಚೌಕ್ ಬಳಿ ಈ ಮಾಡೆಲ್ ಕ್ಯಾಬ್‌ಗಾಗಿ ಕಾಯುತ್ತಿದ್ದಾಗ ಮುಖಕ್ಕೆ ಮಾಸ್ಕ್ ಧರಿಸಿದ್ದ ವ್ಯಕ್ತಿ ಆಕೆ ಸುತ್ತ ಸುತ್ತಾಡಲು ಶುರು ಮಾಡಿದ್ದಾನೆ. ಈ ವ್ಯಕ್ತಿ ನನ್ನ ಹತ್ತಿರ ಬಂದು ಸುತ್ತುತ್ತಿದ್ದ ನನ್ನನ್ನು ದಿಟ್ಟಿಸುತ್ತಿದ್ದ. ಆರಂಭದಲ್ಲಿ ನಾನು ಕೂಡ ಆತನನ್ನು ಗಮನಿಸಿಲ್ಲ. ಆದರೆ ಸ್ವಲ್ಪ ಹೊತ್ತಿನ ನಂತರ ಪ್ಯಾಂಟ್ ಜಿಪ್ ಬಿಚ್ಚಿರುವುದನ್ನು ನಾನು ಗಮನಿಸಿದೆ. ಅವನು ನನ್ನನ್ನು ದಿಟ್ಟಿಸಿ ಹಸ್ತಮೈಥುನ ಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ. ಅವನು ಮಾನಸಿಕ ಅಸ್ವಸ್ಥನಲ್ಲ. ತಾನು ಏನು ಮಾಡುತ್ತಿದ್ದೇನೆ ಎಂಬುದನ್ನು ತಿಳಿದಿತ್ತು. ಆದರೆ ಆತನ ಈ ಕ್ರಿಯೆ ನನಗೆ ತುಂಬಾ ಅಸಹ್ಯವನ್ನುಂಟು ಮಾಡಿತ್ತು. ಮೊದಲು ನನಗೂ ತುಂಬಾ ಭಯ ಆಗಿತ್ತು. ಆದರೆ ನಂತರದಲ್ಲಿ ನಾನು ಆತನ ಈ ಅಸಹ್ಯ ಕೃತ್ಯವನ್ನು ವಿಡಿಯೋ ಮಾಡಿದ್ದೇನೆ. ನಂತರ ಮನೆಗೆ ಹೋದ್ಮೇಲೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗುರ್ಗಾಂವ್ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕಿರುಕುಳದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

Pratap Simha : ಸೌಜನ್ಯಾ ಪ್ರಕರಣದಲ್ಲಿ 3 ತನಿಖೆ ಆಗಿವೆ, ಅವರಮ್ಮ ಬೇರೆ ಯಾವುದಾದ್ರೂ ತನಿಖೆಗೆ ಹೇಳಿದರೆ ನಾವೇ ಅರ್ಜಿ ಹಾಕ್ತೇವೆ – ಪ್ರತಾಪ್ ಸಿಂಹ!!

You may also like