Home » Rajasthan: ಬಣ್ಣ ಹಚ್ಚಬೇಡಿ ಎಂದ ಪರೀಕ್ಷೆಗೆ ಓದುತ್ತಿದ್ದ ಯುವಕ- ಕತ್ತು ಹಿಸುಕಿ ಕೊಂದೇ ಬಿಟ್ಟ ನೀಚರು!!

Rajasthan: ಬಣ್ಣ ಹಚ್ಚಬೇಡಿ ಎಂದ ಪರೀಕ್ಷೆಗೆ ಓದುತ್ತಿದ್ದ ಯುವಕ- ಕತ್ತು ಹಿಸುಕಿ ಕೊಂದೇ ಬಿಟ್ಟ ನೀಚರು!!

0 comments

Rajasthan: ದೇಶಾದ್ಯಂತ ಹೋಳಿ ಹಬ್ಬ ಸಂಭ್ರಮ ಮನೆ ಮಾಡಿದೆ. ಎಲ್ಲ ರಾಜ್ಯಗಳಲ್ಲೂ ಜನರು ಬಣ್ಣದೋಕುಳಿಯನ್ನು ಮಾಡಿ ಸಂಭ್ರಮಿಸುತ್ತಿದ್ದಾರೆ. ಈ ನಡುವೆ ರಾಜಸ್ಥಾನದಲ್ಲಿ ಬಣ್ಣ ಹಚ್ಚಬೇಡಿ ಎಂದಿದ್ದಕ್ಕೆ ದುರುಳರು ಯುವಕನನ್ನು ಕೊಂದ ಘಟನೆ ನಡೆದಿದೆ.

ರಾಜಸ್ಥಾನದ(Rajasthan) ದೌಸಾ ಜಿಲ್ಲೆಯಲ್ಲಿ ಹೋಳಿ ಹಬ್ಬದ ವೇಳೆ ದುರಂತ ಘಟನೆ ಸಂಭವಿಸಿದೆ. ಹಂಸರಾಜ್ ಎಂಬ ಯುವಕ ಸ್ಥಳೀಯ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾಗ ಅಶೋಕ್, ಬಬ್ಲು ಮತ್ತು ಕಲುರಾಮ್ ಎಂಬ ಮೂವರು ಬಂದು ಅವನ ಮೇಲೆ ಬಣ್ಣ ಬಳಿಯಲು ಯತ್ನಿಸಿದ್ದಾರೆ. ಬಣ್ಣ ಹಚ್ಚಲು ಬಂದವರನ್ನು ತಡೆದಿದ್ದಕ್ಕೆ ಕತ್ತು ಹಿಸುಕಿ ಆತನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲು ಒದ್ದು ನಂತರ ಬೆಲ್ಟ್‌ಗಳಿಂದ ಹೊಡೆದು ಕೊನೆಗೆ ಅವನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಕೋಪಗೊಂಡ ಹಂಸರಾಜ್ ಕುಟುಂಬದವರು ಮತ್ತು ಗ್ರಾಮಸ್ಥರು ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದರು.

You may also like