Home » ನೆರೆಮನೆಯವಳು ಮಾತನಾಡಿಲ್ಲ ಎಂದು ಬೇಸರಗೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣು!!!

ನೆರೆಮನೆಯವಳು ಮಾತನಾಡಿಲ್ಲ ಎಂದು ಬೇಸರಗೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣು!!!

0 comments

ನಾಗ್ಪುರ : ತನ್ನ ನೆರೆಮನೆಯ ಮಹಿಳೆಯು ತನ್ನೊಂದಿಗೆ ಸರಿಯಾಗಿ ಮಾತಾಡುತ್ತಿಲ್ಲ ಎಂದು ವ್ಯಕ್ತಿಯೊಬ್ಬ ಆಕೆಗೆ ಚಾಕುವಿನಿಂದ ಇರಿದು‌ ನಂತರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ‌ 47 ವರ್ಷದ ವಿವಾಹಿತ ವ್ಯಕ್ತಿಯೊಬ್ಬ 37 ವರ್ಷದ ಮಹಿಳೆ ತನ್ನೊಂದಿಗೆ ಮಾತನಾಡುವುದನ್ನು‌ ನಿಲ್ಲಿಸಿದ್ದಕ್ಕೇ ಈ ಕೃತ್ಯ ಮಾಡಿದ್ದಾನೆ.

ಮೃತ ಭರತ್ ಆಂಡೇಲ್ಕರ್ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ನೆರೆಯ ಮಹಿಳೆ ಕೂಡಾ ವಿವಾಹಿತೆಯಾಗಿದ್ದು ರೈತ ಮಹಿಳೆಯಾಗಿದ್ದಾಳೆ. ಈಕೆ ಭಿವಾಪುರ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಕೃಷಿಕನಾಗಿದ್ದ ಆಂಡೇಲ್ಕರ್ ಸ್ನೇಹಪೂರ್ವಕವಾಗಿ ಮಾತನಾಡಿದ್ದಕ್ಕೆ ನಂತರ ಅವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ.

ಇದರಿಂದ ಬೇಸರಗೊಂಡ ಈತ ಭಾನುವಾರ ಬೆಳಗ್ಗೆ ಆಕೆಯ ಮನೆಗೆ ಬಂದು ಆಕೆ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ವಿಚಲಿತಳಾದ ಆಕೆ ಪೊಲೀಸ್ ಠಾಣೆಗೆ ಧಾವಿಸಿ, ಎಫ್ ಐ ಆರ್ ದಾಖಲಿಸಿದ್ದಾಳೆ.

ಇದರ ಮಧ್ಯೆ ಆಂಡೇಲ್ಕರ್ ಭಾನುವಾರ ಸಂಜೆ ಅಡ್ಯಾಲ್ ಗ್ರಾಮದ ಕೃಷಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

You may also like

Leave a Comment