Crime: ವಿಶಾಲ್ ಮಾರ್ಟ್ನ ವಾಚ್ ಮ್ಯಾನ್ ಮಹಿಳೆಯ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ವಿಕೃತಿ ಮೆರೆದ ಘಟನೆ ಬೆಂಗಳೂರಿನ ಕೆಂಗೇರಿ ಉಪ ನಗರದಲ್ಲಿರುವ ಮಾರ್ಟ್ನಲ್ಲಿ ನಡೆದಿದೆ. ಮಹಿಳೆಯ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ ತೋರಿದಕ್ಕೆ ಪ್ರಶ್ನಿಸಿದ ಮಹಿಳೆಯ ಮೇಲೆ ಹಲ್ಲೆಯೂ ಮಾಡಿ ವ್ಯಕ್ತಿ ಅಟ್ಟಹಾಸ ಮೆರೆದಿದ್ದಾನೆ.
ಕಳೇದ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಾರ್ಟ್ ಗೆ ಬಂದ ಮಹಿಳೆಯರ ಜೊತೆ ಚಂದ್ರಹಾಸ ಅನ್ನೋ ವ್ಯಕ್ತಿ ಅಸಭ್ಯ ವರ್ತನೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದ್ದು, ಇದನ್ನು ಮಹಿಳೆ ಪ್ರಶ್ನಿಸಿದಕ್ಕೆ ಆಸಾಮಿ ಮಹಿಳೆಯರ ಮೇಲೆ ಹಲ್ಲೆಯೂ ನಡೆಸಿದ್ದಾನೆ ಎಂದು ವರದಿಯಾಗಿದೆ. ವಿಶಾಲ್ ಮಾರ್ಟ್ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಚಂದ್ರಹಾಸ, ಶಶಿರೇಖಾ ಎಂಬುವವರ ಮುಂದೆ ಪ್ಯಾಂಟ್ ಜಿಪ್ ಬಿಚ್ಚಲು ಬಂದಾಗ ಸ್ಥಳೀಯರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಾರ್ವಜನಿಕರು ಗೂಸಾ ನೀಡಲು ಮುಂದಾದಾಗ ಸ್ಥಳಕ್ಕೆ ಬಂದ ಪೊಲೀಸರು, ಸದ್ಯ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
