Google Map: ಗೂಗಲ್ ಮ್ಯಾಪ್‌ನಲ್ಲಿ (Google Map) ಸಣ್ಣ ಸೆಟ್ಟಿಂಗ್ ಒಂದನ್ನು ಮಿಸ್ ಮಾಡಿದ್ದಕ್ಕೆ ಯುವಕನೋರ್ವ ಜೈಲು ಪಾಲಾಗಿದ್ದಾನೆ. ಈತನ ಹೆಸರು ಕಿರಣ್ ಸುನೀಲ್ ಪಟೇಲ್ (24) ಎಂದಾಗಿದ್ದು, ಈತ ಗುಜರಾತ್‌ನ (Gujarat) ಅಹಮದಾಬಾದ್‌ನ ನಿವಾಸಿಯಾಗಿದ್ದಾನೆ. ಸುನೀಲ್ ತನ್ನ ಮಾವನಿಗಾಗಿ ಔಷಧಿ ತರಲು ಮನೆಯಿಂದ ಹೊರಟಿದ್ದ. ಈ ವೇಳೆ ಗೂಗಲ್ ಮ್ಯಾಪ್ ಯೂಸ್ ಮಾಡಿದ್ದ. ಇದರಲ್ಲಿ ಕಾರ್ ಬದಲು ಬೈಕ್ ಎಂದು ಆಪ್ಷನ್ ಬದಲಾಯಿಸಲು ಮರೆತಿದ್ದಾನೆ. ಬೈಕ್ ನಲ್ಲಿ ತೆರಳಿದಾತ ಮುಂಬೈನ (Mumbai) ಪ್ರಸಿದ್ಧ ಬಾಂದ್ರಾ-ವೊರ್ಲಿ ಸೀ ಲಿಂಕ್‌ನಲ್ಲಿ ಬೈಕ್‌ನಲ್ಲಿ ರೈಡ್ ಮಾಡಿದ್ದಾನೆ. ಈ ಕಾರಣಕ್ಕೆ ಪೊಲೀಸರು ‘ನರಹತ್ಯೆಗೆ ಯತ್ನ’ದ ಕೇಸ್ ದಾಖಲು ಮಾಡಿ ಜೈಲಿಗೆ ನೂಕಿದ್ದಾರೆ.
ಕಿರಣ್ ಮುಂಬೈನ ಖಾಂಡಿವಿಲಿಯಲ್ಲಿ (Khandivili) ವಾಸವಿದ್ದ ತಮ್ಮ 80 ವರ್ಷದ ಮಾವನನ್ನು ಭೇಟಿಯಾಗಲು ಬಂದಿದ್ದ. ಹುಷಾರಿಲ್ಲದ ಮಾವನಿಗೆ ಔಷಧಿಯನ್ನು ತರಲು ವೈದ್ಯರ ಬಳಿ ತೆರಳಿದ್ದ. ಕಿರಣ್ ಪಟೇಲ್ ಮೊಬೈಲ್‌ಗೆ ವೈದ್ಯರು ಲೊಕೇಷನ್ ಅನ್ನು ಕಳಿಸಿದ್ದರು. ಇದನ್ನು ಗೂಗಲ್ ಮ್ಯಾಪ್‌ನಲ್ಲಿ ಆತ ಸೆಟ್ ಮಾಡಿಕೊಂಡಿದ್ದ. ಆದರೆ, ಕಿರಣ್ ಮೊಬೈಲ್‌ನಲ್ಲಿ ‘ಕಾರ್ ಡ್ರೈವಿಂಗ್’ ಮ್ಯಾಪ್‌ನ ಡಿಫಾಲ್ಟ್ ಆಪ್ಷನ್ ಆಗಿತ್ತು. ಖಾಂಡಿವಿಲಿಯಿಂದ ಹೊರಡುವಾಗ, ಬೈಕ್ ನಲ್ಲಿ ತೆರಳಿದ್ದ ಆದರೆ, ಆಪ್ಶನ್ ಅನ್ನು ದ್ವಿಚಕ್ರ ವಾಹನಕ್ಕೆ ಬದಲಾಯಿಸಲು ಅವನು ಮರೆತು ಹೋಗಿದ್ದ.
ಕಿರಣ್ ಪಟೇಲ್ ಜೊತೆ ಸೋದರ ಸಂಬಂಧಿ ಮೇಹುಲ್ ಮಿಥಾಪರ (17) ಹೋಗಿದ್ದ. ಇವರು ಮುಂಬೈನ ಪ್ರಸಿದ್ಧ ಬಾಂದ್ರಾ-ವೊರ್ಲಿ ಸೀ ಲಿಂಕ್‌ನಲ್ಲಿ ಸಾಗುವಾಗ ಪೊಲೀಸ್ ಅಧಿಕಾರಿ ಬೈಕ್ ತಡೆದು ನಿಲ್ಲಿಸಿದರು. ಸೀ ಲಿಂಕ್‌ನಲ್ಲಿ ಬೈಕ್‌ಗಳಿಗೆ ಹಾಗೂ ದ್ವಿಚಕ್ರ ವಾಹನಗಳಿಗೆ ಪ್ರವೇಶವಿಲ್ಲ ಎಂದು ಹೇಳಿ ಪೊಲೀಸ್ ಆತನನ್ನು ತಡೆದು ಅಲ್ಲಿಂದ ವಾಪಾಸ್ ಬರುವಂತೆ ಹೇಳಿದರು. ಆದರೆ, ಟೋಲ್ ಬೂತ್‌ನಲ್ಲಿ ಇವರು ಯೂಟರ್ನ್ ಮಿಸ್ ಮಾಡಿಕೊಂಡಿದ್ದರು. ಇನ್ನು ರಸ್ತೆಯಲ್ಲಿ ಎರಡು-ಮೂರು ಕಾರುಗಳು ಮಾತ್ರವೇ ಇದ್ದವು. ಹಾಗಾಗಿ ಕಿರಣ್ ಅಲ್ಲಿಯೇ ಬೈಕ್ ತಿರುಗಿಸಿ ರಾಂಗ್ ಸೈಡ್‌ನಲ್ಲಿಯೇ 20-30 ಮೀಟರ್ ಹೋಗಿ, ರಸ್ತೆಯ ಸರಿಯಾದ ಭಾಗಕ್ಕೆ ಹೋಗುವ ಪ್ರಯತ್ನ ಮಾಡಿದ್ದ.
ಅಷ್ಟರಲ್ಲಿ ಬೇರೆ ಪೊಲೀಸರು ಬಂದು ಕಿರಣ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 308 (ನರಹತ್ಯೆಯ ಪ್ರಯತ್ನ), 279 ಮತ್ತು 336 ಮತ್ತು ಮೋಟಾರು ವಾಹನ ಕಾಯಿದೆಯ 184, 179, 190(2),3/181, 4(2)/177(ಎ) ಅಡಿಯಲ್ಲಿ ಬಂಧಿಸಿದ್ದಾರೆ. ಈ ವೇಳೆ ಕುನಾಲ್, ಪೊಲೀಸ್ ಪೇದೆಯ ಸೂಚನೆ ಮೇರೆಗೆ ಕಿರಣ್ ಯು ಟರ್ನ್ ತೆಗೆದುಕೊಂಡಿದ್ದಾನೆ ಎಂದು ಹೇಳಿದರೂ ಪೊಲೀಸರು ಲಕ್ಷ್ಯಗೊಡಲಿಲ್ಲ.
ಸದ್ಯ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಅದಕ್ಕಾಗಿ 20 ಸಾವಿರ ರೂಪಾಯಿ ಕಟ್ಟುವಂತೆ ಕಿರಣ್ ಪಟೇಲ್‌ಗೆ ಹೇಳಿದೆ. “20 ಸಾವಿರ ರೂಪಾಯಿ ಕಟ್ಟಲು ಹಣವಿಲ್ಲ. ಸಂಬಂಧಿಕರ ಬಳಿ ಕೇಳಿ ಹಣದ ವ್ಯವಸ್ಥೆ ಮಾಡುತ್ತಿದ್ದೇವೆ. ಪೊಲೀಸರು ಸಂಪೂರ್ಣವಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಮೊದಲು ಪೊಲೀಸ್ ಪೇದೆ ಆತನನ್ನು ಯು-ಟರ್ನ್ ತೆಗೆದುಕೊಳ್ಳುವಂತೆ ಹೇಳಿದ್ದು, ನಂತರ ಪೊಲೀಸರು ಸೆಕ್ಷನ್ 308 ಅನ್ನು ಕೇಸ್‌ನಲ್ಲಿ ಸೇರಿಸಿದ್ದಾರೆ. ನಾವು ಒಮ್ಮೆ ನಮ್ಮ ಮನೆಗೆ ಭೇಟಿ ನೀಡಿ ಅವರ ಮಾವನ ಸ್ಥಿತಿಯನ್ನು ನೋಡುವಂತೆ ಪೊಲೀಸರಿಗೆ ಮನವಿ ಮಾಡಿದರೂ ಅವರು ಕರುಣೆ ತೋರಿಸಲಿಲ್ಲ, ” ಎಂದು ಕುನಾಲ್ ಹೇಳಿದ್ದಾರೆ.
ಇದನ್ನು ಓದಿ: Born on 25th: ನೀವು 25ನೆಯ ತಾರೀಖು ಜನಿಸಿದ್ದೀರಾ? ಹಾಗಾದ್ರೆ ಲಕ್ಕಿ ಬಿಡಿ
