ಶಬರಿಮಲೆ: ಶಬರಿಮಲೆಯಲ್ಲಿ ಡಿ.27ರಂದು ಬೆಳಗ್ಗೆ 10.10ರಿಂದ 11.30ರವರೆಗಿನ ಮುಹೂರ್ತದಲ್ಲಿ ಈ ವರ್ಷದ ಮಂಡಲ ಪೂಜೆ ನಡೆಯಲಿದೆ. ಮಂಡಲಪೂಜೆಗೆ ಸಂಬಂಧಿಸಿದ ದೀಪಾರಾಧನೆ ಬೆಳಗ್ಗೆ 11.30ಕ್ಕೆ ಪೂರ್ಣಗೊಳ್ಳಲಿದೆ ಎಂದು ತಂತ್ರಿ ಕಂಠರರ್ ಮಹೇಶ್ ಮೋಹನರ್ ತಿಳಿಸಿದ್ದಾರೆ.
ಮಂಡಲ ಪೂಜೆಗಾಗಿ ಶಬರೀಶನಿಗೆ ತೊಡಿಸಲಾಗುವ ತಂಗ ಅಂಗಿ ಆಭರಣಗಳನ್ನು ಹೊತ್ತ ರಥ ಮೆರವಣಿಗೆ ಡಿ.23ರಂದು ಬೆಳಗ್ಗೆ 7ಕ್ಕೆ ಆರಣ್ಣುಲ ಪಾರ್ಥಸಾರಥಿ ದೇವಸ್ಥಾನದಿಂದ ಹೊರಟು, ಡಿ.26ರಂದು ಸಂಜೆ ದೀಪಾರಾಧನೆಗೂ ಮುನ್ನ ಸನ್ನಿಧಾನ ತಲುಪಲಿದೆ. ತಂಗ ಅಂಗಿಯನ್ನು ಅಯ್ಯಪ್ಪ ವಿಗ್ರಹದ ಮೇಲೆ ಇಟ್ಟು ಸಂಜೆ 6.30ಕ್ಕೆ ದೀಪಾರಾಧನೆ ನಡೆಯಲಿದೆ. ಡಿ.27ರಂದು ಮಧ್ಯಾಹ್ನ ತಂಗ ಅಂಗಿ ತೊಡಿಸಿ ಮಂಡಲ ಪೂಜೆ ನಡೆಯಲಿದೆ. 27ರಂದು ರಾತ್ರಿ 11ಕ್ಕೆ ಹರಿವರಾಸನಂ ಗಾಯನದೊಂದಿಗೆ ದೇಗುಲ ಮುಚ್ಚಲಾಗುವುದು. ಡಿ.30ರಂದು ಸಂಜೆ 5ಕ್ಕೆ ಮಕರಜ್ಯೋತಿ ಉತ್ಸವಕ್ಕಾಗಿ ಮತ್ತೆ ತೆರೆಯಲಾಗುವುದು ಎಂದು ತಂತ್ರಿಗಳು ತಿಳಿಸಿದ್ದಾರೆ.
