Home » Mandya: ಬೀದಿ ಬದಿ ಐಸ್‌ಕ್ರೀಂ ತಿಂದು ಅವಳಿ ಮಕ್ಕಳ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮಕ್ಕಳಿಗೆ ತಾನೇ ವಿಷ ಉಣಿಸಿದ ತಾಯಿ !!

Mandya: ಬೀದಿ ಬದಿ ಐಸ್‌ಕ್ರೀಂ ತಿಂದು ಅವಳಿ ಮಕ್ಕಳ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮಕ್ಕಳಿಗೆ ತಾನೇ ವಿಷ ಉಣಿಸಿದ ತಾಯಿ !!

0 comments
Mandya

Mandya: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಐಸ್‌ಕ್ರೀಂ ತಿಂದು ಒಂದೂವರೆ ವರ್ಷದ ಅವಳಿ ಮಕ್ಕಳು ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿರುವ ಘಟನೆಯೊಂದು ನಿನ್ನೆ ಎಲ್ಲರಿಗೂ ಅಘಾತ ಉಂಟುಮಾಡಿತ್ತು. ಆದರೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಇದನ್ನೂ ಓದಿ: Karnataka Rain: ಗುಡುಗು ಸಹಿತ ಭಾರೀ ಮಳೆಯ ಸಂಭವ; 40ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

ಐಸ್‌ಕ್ರೀಂ(Icecream) ಮಾರಲು ಬಂದಿದ್ದ ವ್ಯಕ್ತಿಯಿಂದ ಐಸ್‌ಕ್ರೀಂ ಖರೀದಿಸಿ ತಾಯಿ ಮಕ್ಕಳು ತಿಂದಿದ್ದರು. ಕೆಲ ಹೊತ್ತಿನ ಬಳಿಕ ಅವಳಿ ಮಕ್ಕಳು ಐಸ್‌ಕ್ರೀಂ ತಿಂದು ಮೃತ ಹೊಂದಿದ್ದರು. ಮಕ್ಕಳು ಮನೆಯಲ್ಲಿ ಮೃತ ಹೊಂದಿದ್ದರೆ, ತಾಯಿಯು ತೀವ್ರ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಗೊತ್ತಾಗಿದ್ದು, ತಾಯಿಯೇ ಮಗುವಿಗೆ ವಿಷ ಹಾಕಿ ಸಾಯಿಸಿದ್ದಾಳೆ ಎನ್ನುವ ಸ್ಪೋಟಕ ಸತ್ಯ ಬಯಲಾಗಿದೆ.

ಇದನ್ನೂ ಓದಿ: Crime News: ತಡರಾತ್ರಿ ಬೆಚ್ಚಿಬೀಳೀಸುವ ಘಟನೆ; ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಬರ್ಬರ ಹತ್ಯೆ

ಪೂಜ(Pooja) ಮತ್ತು ಪ್ರಸನ್ನ(Prasanna) ದಂಪತಿಯ ಕೌಟುಂಬಿಕ ಕಲಹದ ಕಾರಣಕ್ಕೆ ಒಟ್ಟು ಮೂರು ಮಕ್ಕಳಾದ ತ್ರಿಶುಲ್, ತ್ರಿಶ ಅವಳಿ ಮಕ್ಕಳು ಹಾಗೂ ಮಗಳು ಬೃಂದಾಗೆ ತಾಯಿ ಪೂಜಾ ವಿಷ ಹಾಕಿದ್ದಳು. ಪೋಲೀಸ್ ತನಿಖೆ ವೇಳೆ ಪೂಜ ಎಲ್ಲವನ್ನೂ ಬಾಯಿಬಿಟ್ಟಿದ್ದಾಳೆ.

ಗಂಡ ಹಾಗೂ ಪೂಜ ಪದೇ ಪದೇ ಜಗಳವಾಡುತ್ತಿದ್ದರು. ಜಗಳದಿಂದ ಬೇಸತ್ತು ಬುಧವಾರ ಮಕ್ಕಳಿಗೆ ಪೂಜಾ ವಿಷ ಹಾಕಿದ್ದಳು. ಮನೆಯಲ್ಲಿ ಇದ್ದ ಜಿರಳೆಯ ಲಕ್ಷ್ಮಣ ರೇಖೆಯನ್ನು ಊಟಕ್ಕೆ ಹಾಕಿ ಮಕ್ಕಳಿಗೆ ಪೂಜಾ ತಿನ್ನಿಸಿದ್ದಳು. ಅಲ್ಲದೆ ತಾನೂ ತಿಂದಿದ್ದಳು. ಸದ್ಯ ಮೊದಲ ಮಗಳು ಬೃಂದಾ ಹಾಗೂ ತಾಯಿ ಪೂಜಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

You may also like

Leave a Comment