Home » Mandya: KRS ಗೆ ಟಿಪ್ಪುವಿನಿಂದ ಅಡಿಗಲ್ಲು ಎಂದ ಸಚಿವ ಮಹದೇವಪ್ಪ ಹೇಳಿಕೆ ವಿವಾದ: ಸಂಸದ ಯದುವೀರ್‌ ತೀವ್ರ ಆಕ್ರೋಶ

Mandya: KRS ಗೆ ಟಿಪ್ಪುವಿನಿಂದ ಅಡಿಗಲ್ಲು ಎಂದ ಸಚಿವ ಮಹದೇವಪ್ಪ ಹೇಳಿಕೆ ವಿವಾದ: ಸಂಸದ ಯದುವೀರ್‌ ತೀವ್ರ ಆಕ್ರೋಶ

0 comments

Mandya: ಕೆಆರ್‌ಎಸ್‌ ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್‌ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಹೆಚ್‌ಸಿ ಮಹದೇವಪ್ಪ ಅವರ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದ್ದು, ಮೈಸೂರು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಇದು ಹಾಸ್ಯಾಸ್ಪದ ಹೇಳಿಕೆ. ಇತಿಹಾಸವನ್ನು ತಿದ್ದುಪಡಿ ಮಾಡುವ ಪ್ರಯತ್ನದ ಭಾಗವಿದು ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೆಆರ್‌ಎಸ್‌ ಕಟ್ಟಿದವರು ಯಾರು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಇತಿಹಾಸ ತಜ್ಞರು ಈ ಕುರಿತು ನಿಖರವಾದ ಮಾಹಿತಿ ನೀಡುತ್ತಾರೆ. ಈ ರೀತಿಯ ಕಥೆಯನ್ನು ನಾನು ಇಲ್ಲಿಯವರೆಗೆ ಕೇಳಿಲ್ಲ ಎಂದು ಯದುವೀರ್‌ ಹೇಳಿದರು.

ಈ ಕುರಿತು ಪತ್ರ ದಾಖಲೆಯಿದೆ. ನಾಲ್ಕು ದೊಡ್ಡ ಯುದ್ಧಗಳು ಟಿಪ್ಪುವಿನ ಸಮಯದಲ್ಲಿ ನಡೆದಿದೆ. ದೇವಾಲಯಗಳನ್ನು ಹಾನಿ ಮಾಡಲಾಗಿದೆ. ಆ ಕಾಲದಲ್ಲಿ ಶ್ರೀರಂಗನಾಥ ಮತ್ತು ನಂಜನಗೂಡಿನ ದೇವಾಲಯಗಳಲ್ಲಿ ಮಾತ್ರ ಪೂಜೆ ಮಾಡಲಾಗುತ್ತಿತ್ತು. ಈ ರೀತಿಯ ಹೇಳಿಕೆಗಳು ಮತದಾರರ ಓಲೈಸುವೆ ಅನುಕೂಲಕ್ಕಾಗಿ ಮಾಡಲಾಗುತ್ತದೆ. ಇತಿಹಾಸ ತಿರುಚಿ ಮತ ಗಳಿಕೆಗೆ ಉಪಯೋಗ ಮಾಡುವುದು ಸರಿಯಲ್ಲ ಎಂದು ಒಡೆಯರ್‌ ಹೇಳಿದ್ದಾರೆ.

ರಾಜಕೀಯ ನಾಯಕರು ಇತಿಹಾಸವನ್ನು ಆಧಾರರಹಿತವಾಗಿ ಪ್ರಸ್ತಾಪ ಮಾಡುವುದು ತಪ್ಪು. ತಮ್ಮ ರಾಜಕೀಯಕ್ಕೆ ಇದನ್ನು ಬಳಸಬಾರದು ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

You may also like