Home » Dowry Case: ವರದಕ್ಷಿಣೆ ಕಿರುಕುಳ; ನವವಧು ನೇಣಿಗೆ ಶರಣು; ಡೆತ್‌ನೋಟ್‌ ಪತ್ತೆ

Dowry Case: ವರದಕ್ಷಿಣೆ ಕಿರುಕುಳ; ನವವಧು ನೇಣಿಗೆ ಶರಣು; ಡೆತ್‌ನೋಟ್‌ ಪತ್ತೆ

0 comments
Dowry Case

Mandya Suicide News: ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಘಟನೆ ಗೃಹಿಣಿಯೊಬ್ಬಳು ನೆಣಿಗೆ ಶರಣಾಗಿರುವ ವರದಿಯಾಗಿದೆ.

ಇದನ್ನೂ ಓದಿ: Drowned in Sea: ಮಂಗಳೂರು: ಸಮುದ್ರದಲ್ಲಿ ಮೀನು ಹಿಡಿಯಲೆಂದು ಹೋದ ವಿದ್ಯಾರ್ಥಿ ನೀರಿನ ರಭಸಕ್ಕೆ ಸಿಲುಕಿ ಸಾವು

ಪ್ರೇಮಕುಮಾರಿ (26) ಎಂಬಾಕೆಯೇ ಮೃತ ಮಹಿಳೆ. 2022 ರಲ್ಲಿ ಮೈಸೂರಿನ ರಾಘವೇಂದ್ರ ಎಂಬುವವರನ್ನು ಮದುವೆಯಾಗಿದ್ದ ಪ್ರೇಮಕುಮಾರಿ ಮದುವೆಯಾಗಿದ್ದರು. ಮದುವೆ ಸಮಯದಲ್ಲಿ 150 ಗ್ರಾಂ ಚಿನ್ನ, ಐದು ಲಕ್ಷ ವರದಕ್ಷಿಣೆಯನ್ನು ನೀಡಲಾಗಿತ್ತು. ಆದರೆ ಮದುವೆಯಾದ ಮೂರು ತಿಂಗಳಿಗೆ ರಾಘವೇಂದ್ರ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡೋಕೆ ಶುರು ಮಾಡಿದರು. 64 ಲಕ್ಷ ರೂ. ವರದಕ್ಷಿಣೆ ತಗೊಂಡು ಬಾ ಇಲ್ಲದಿದ್ದರೆ ಮನೆಯಲ್ಲಿ ಜಾಗವಿಲ್ಲ ಎಂದು ಮಾನಸಿಕ ಹಿಂಸೆ ಜೊತೆ ಕಿರುಕುಳ ನೀಡುತ್ತಿದ್ದರು ಎಂದು ಪ್ರೇಮಕುಮಾರಿ ಡೆತ್‌ನೋಟಲ್ಲಿ ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ: Belthangady: ಮಂಗಳೂರು-ಹಾಸನ ಪೆಟ್ರೋನೆಟ್‌ ಡೀಸೆಲ್‌ ಪೈಪ್‌ಲೈನಿಗೆ ಕನ್ನ; ದೂರು ದಾಖಲು

ಪ್ರೇಮಕುಮಾರಿಯನ್ನು ಗಂಡನ ಮನೆಯವರು ತವರು ಮನೆಗೆ ಕಳುಹಿಸಿದ್ದರು. ವಿದ್ಯಾಭ್ಯಾಸವನ್ನು ಪ್ರೇಮಕುಮಾರಿ ತನ್ನ ತವರು ಮನೆಯಲ್ಲಿ ಮುಂದುವರಿಸಿದ್ದಳು. ಆದರೆ ಇತ್ತೀಚೆಗೆ ವರದಕ್ಷಿಣೆ ತಗೊಂಡು ಬಾ ಇಲ್ಲದಿದ್ದರೆ ಕೊಲೆ ಮಾಡಿಸುವ ಬೆದರಿಕೆ ಹಾಕಿದ್ದರು. ಇವರ ಕಾಟ ಸಹಿಸಲು ಆಗುತ್ತಿಲ್ಲ ಎಂದು ನಿತ್ಯ ಭಯದಲ್ಲೇ ಕಾಲ ಕಳೆಯುತ್ತಿದ್ದ ನವವಧು ಇವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಡೆತ್‌ನೋಟಲ್ಲಿ ಬರೆದಿದ್ದಾಳೆ.

ಸುಮಾರು ಐದು ಪುಟಗಳ ಡೆತ್‌ನೋಟ್‌ ಬರೆದಿಟ್ಟಿದ್ದು, ಬುಧವಾರ ನೇಣಿಗೆ ಶರಣಾಗಿದ್ದಾಳೆ. ಈ ಘಟನೆ ಸಂಬಂಧ ರಾಘವೇಂದ್ರ ಕುಟುಂಬಸ್ಥರ ವಿರುದ್ಧ ಕಿಕ್ಕೆರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

You may also like

Leave a Comment