Home » Mandya: ಮಂಡ್ಯ : ವಿ.ಸಿ ನಾಲೆಯಲ್ಲಿ ಕಾರಿನ ಒಳಗೆ ಮೂರು ಮೃತದೇಹಗಳು ಪತ್ತೆ!

Mandya: ಮಂಡ್ಯ : ವಿ.ಸಿ ನಾಲೆಯಲ್ಲಿ ಕಾರಿನ ಒಳಗೆ ಮೂರು ಮೃತದೇಹಗಳು ಪತ್ತೆ!

0 comments

Mandya: ಮಂಡ್ಯ ತಾಲ್ಲೂಕಿನ ಕೆ.ಆ‌ರ್.ಎಸ್. ಅಣೆಕಟ್ಟೆಯ ನಾರ್ತ್ ಬ್ಯಾಂಕ್ ಗ್ರಾಮದ ಸಮೀಪ ವಿಶ್ವೇಶ್ವರಯ್ಯ ನಾಲೆಯ ಒಳಗೆ, ಕಾರಿನಲ್ಲಿ ಮೂರು ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ.

ಮೈಸೂರು ಜಿಲ್ಲೆ ಕೆ.ಆ‌ರ್. ನಗರ ತಾಲ್ಲೂಕು ಹೆಬ್ಬಾಳು ಗ್ರಾಮದ ಕುಮಾರಸ್ವಾಮಿ (38), ಅವರ ಮಕ್ಕಳಾದ ಅದ್ವತ್ (8) ಮತ್ತು ಅಕ್ಷತಾ (3) ಎಂದು ಗುರುತಿಸಲಾಗಿದೆ.

ಕುಮಾರಸ್ವಾಮಿ ಏ. 16ರಂದು ಮಕ್ಕಳ ಜತೆ ತಮ್ಮ ಕಾರಿನಲ್ಲಿ ಬೆಂಗಳೂರಿನಿಂದ ಕೆ. ಆರ್. ನಗರಕ್ಕೆ ಹೊರಟಿದ್ದರು. ಬಳಿಕ ಅವರ ಸುಳಿವು ಸಿಕ್ಕಿರಲಿಲ್ಲ. ಏ.19ರಂದು ಕೆ.ಆರ್. ನಗರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದೀಗ ಕಾರು ಮತ್ತು ಮೃತದೇಹಗಳನ್ನು ನಾಲೆಯಿಂದ ಮೇಲೆ ಎತ್ತಲಾಗಿದೆ. ಕಾರು ನಾಲೆಗೆ ಉರುಳಲು ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದರು. ಕೆ.ಆರ್.ಎಸ್. ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

You may also like